ಹೊಸ ದಿಗಂತ ವರದಿ,ಕಲಬುರಗಿ:
ರಸ್ತೆ ದಾಟುತ್ತಿದ್ದ ವೃದ್ದೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲೇ ವೃದ್ಯೆಯೊಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸೇಡಂ ತಾಲೂಕಿನ ರಿಂಗ್ ರಸ್ತೆಯ ಬಳಿ ಬುಧವಾರ ಸಂಜೆ ನಡೆದಿದೆ.
ಕಲಬುರಗಿ ಜಿಲ್ಲೆಯ ಸೇಡಂ ರಿಂಗ್ ರಸ್ತೆ ಬಳಿಯ ಟೋಯಾಟಾ ಕಾರ್ ಶೋರುಂ ಹತ್ತಿರ ಈ ಘಟನೆ ನಡೆದಿದ್ದು,ಘಟನೆಯಲ್ಲಿ ಸುಮಿತ್ರಾ ( 75) ಎಂಬ ವೃದ್ಯೆ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಬೀದರ್ ಜಿಲ್ಲೆಯ ನಿವಾಸಿಯಾಗಿರುವ ಸುಮಿತ್ರಾ ಅವರು ಕಲಬುರಗಿಯ ಬಿದ್ದಾಪುರ ಕಾಲೂನಿಯಲ್ಲಿ ಅಳಿಯನ ಮನೆಗೆ ಭೇಟಿಗಾಗಿ ಆಗಮಿಸಿದ್ದರು.
ರಸ್ತೆ ದಾಟುವಾಗ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮವಾಗಿ ಈ ಅವಘಡ ಸಂಭವಿಸಿದೆ.ಈ ಕುರಿತು ನಗರದ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.