ಕೇರಳ ಗಡಿಭಾಗದ ಜಿಲ್ಲೆಗಳಲ್ಲಿ ಕಟ್ಟೆಚ್ಚರ: ಸಚಿವ ದಿನೇಶ್ ಗುಂಡೂರಾವ್

ಹೊಸದಿಗಂತ ವರದಿ, ಮೈಸೂರು:

ಓಮಿಕ್ರಾನ್ ವೇಗದಂತೆ ಜೆಎನ್-1 ತಳಿ ಹರಡುವುದಿಲ್ಲ.ಪರಿಣಾಮಕಾರಿಯಾಗಿ ಇರುವುದಿಲ್ಲವೆಂದು ತಜ್ಞರು ಹೇಳಿದ್ದಾರೆ. ಆದರೂ ಕೂಡ ಕೋವಿಡ್ ಈ ರೂಪಾಂತರಿ ತಳಿ ಹರಡುವಿಕೆಯ ನಿಯಂತ್ರಣಕ್ಕೆ ಹೆಚ್ಚಿನ ಗಮನಹರಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಶನಿವಾರ ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಂತ್ರಿಕ ಸಲಹಾ ಸಮಿತಿ ಹೇಳಿರುವ ಮಾರ್ಗದರ್ಶನಗಳನ್ನು ಪಾಲಿಸಲಾಗುತ್ತಿದೆ. ಮಂಗಳವಾರ ಕೋವಿಡ್ ಸಂಬ೦ಧ ರಚಿಸಿರುವ ಉಪ ಸಮಿತಿ ಸಭೆ ನಡೆಯಲಿದ್ದು, ಅಲ್ಲಿ ವಿಸ್ತೃತವಾಗಿ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗವುದು. ಎಂದು ತಿಳಿಸಿದರು.

ರಾಜ್ಯದಲ್ಲಿ ಕೋವಿಡ್ ರೂಪಾಂತರಿ ಜೆಎನ್-1 ತಳಿ ಸೋಂಕು ಹರಡದಂತೆ ಕೇರಳ ಗಡಿಭಾಗದ ಜಿಲ್ಲೆಗಳಲ್ಲಿಕಟ್ಟೆಚ್ಚರ ವಹಿಸುವ ಜತೆಗೆ, ಪ್ರತಿನಿತ್ಯ ಐದು ಸಾವಿರ ಆರ್‌ಪಿಸಿಸಿಆರ್ ಟೆಸ್ಟ್ಗಳನ್ನು ಮಾಡುವುದಕ್ಕೆ ಗುರಿ ನೀಡಲಾಗಿದೆ.

ಕೇರಳ ಬಿಟ್ಟರೆ ಕರ್ನಾಟಕದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿದೆ. ಕೇರಳ ನಂತರ ರಾಜ್ಯದಲ್ಲಿ ಅತಿ ಹೆಚ್ಚು ಆರ್‌ಟಿಪಿಸಿಆರ್ ಟೆಸ್ಟ್ ಮಾಡಲಾಗುತ್ತಿದೆ. ಭಾನುವಾರದಿಂದಲೇ ಐದು ಸಾವಿರ ಟೆಸ್ಟ್ಗಳನ್ನು ಮಾಡುವುದಕ್ಕೆ ಟಾರ್ಗೆಟ್ ನೀಡಲಾಗಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಕೋವಿಡ್ ಪಾಸಿಟಿವ್‌ನಿಂದ ನಾಲ್ವರು ಮೃತಪಟ್ಟಿದ್ದರೂ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿದದ್ದು ಪರೀಕ್ಷಾ ವರದಿಯಲ್ಲಿ ಗೊತ್ತಾಗಿದೆ. ಪ್ರಸ್ತುತ 175 ಸಕ್ರಿಯ ಪ್ರಕರಣಗಳಿದ್ದು, 2366 ಟೆಸ್ಟ್ಗಳನ್ನು ಮಾಡಲಾಗುತ್ತಿದೆ. ಮುಂದೆ ಐದು ಸಾವಿರ ಟೆಸ್ಟ್ಗಳನ್ನು ಮಾಡುವುದರಿಂದ ಗೊತ್ತಾಗಲಿದೆ ಎಂದರು.

ಕೇರಳ ಗಡಿಭಾಗದ ಮಂಗಳೂರು,ಕೊಡಗು,ಚಾಮರಾಜನಗರ,ಮೈಸೂರು ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಜತೆಗೆ ಹೆಚ್ಚಿನ ಟೆಸ್ಟ್ಗಳನ್ನು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಕೊರೋನಾ ನಿಯಂತ್ರಣದಲ್ಲಿರುವ ಕಾರಣಸ್ಕ್ರಿನಿಂಗ್ ಮಾಡುವ ಅವಶ್ಯಕತೆ ಇಲ್ಲ ಎಂದರು. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸಿನಂತೆ 60 ವರ್ಷ ಮೇಲ್ಪಟ್ಟವರು ಮಾಸ್ಕ್ ಧರಿಸುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿ ಓಡಾಡುವಂತೆ ತಿಳಿಸಲಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ
ಐಸಿಯುಬೆಡ್,ವೆಂಟಿಲೇಟರ್ ಬೆಡ್,ಆಕ್ಸಿಜನ್ ಸೇರಿದಂತೆ ಇನ್ನಿತರ ವ್ಯವಸ್ಥೆಗಳನ್ನು ಕಲ್ಪಿಸಲಾಗಿರುವ ಜತೆಗೆ ಮಾಕ್ ಡ್ರಿಲ್ ಮಾಡಿ ಸಜ್ಜುಗೊಳಿಸಲಾಗಿದೆ. ನೆಗಡಿ,ಕೆಮ್ಮು ಮತ್ತು ಜ್ವರ ಇದ್ದವರಿಗೆ ತಪಾಸಣೆ ಮಾಡುವ ಜತೆಗೆ ಐಎಲ್‌ಐ,ಸಾರಿ ಪ್ರಕರಣಗಳು ಕಂಡುಬoದರೆ, ಕೂಡಲೇ ಆರ್‌ಟಿಸಿಪಿಆರ್ ಟೆಸ್ಟ್ಗೆ ಕಳುಹಿಸುವಂತೆ ಅಧಿಕಾರಿಗಳಿಗೆ ಹೇಳಲಾಗಿದೆ ಎಂದರು. ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆಗೆ ಸಂಬoಧಿಸಿದoತೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಹೆಚ್ಚಿನ ಜನರು ಸೇರುವ ಕಡೆಗಳಲ್ಲಿಮಾಸ್ಕ್ ಧರಿಸುವುದು ಉತ್ತಮ. ಕೋವಿಡ್ ಸೋಂಕಿತರು ಇದ್ದರೆ, ಉಸಿರಾಟದಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆ ಇದೆ. ಹಾಗಾಗಿ, ಹೊಸ ವರ್ಷದ ಸಂಭ್ರಮದಲ್ಲಿರುವಾಗ ಮಾಸ್ಕ್ ಧರಿಸಿ ಓಡಾಡುವಂತೆ ಮನವಿ ಮಾಡಿದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!