ಹೊಸದಿಗಂತ ವರದಿ ಶಿವಮೊಗ್ಗ:
ತರಕಾರಿ ವ್ಯಾಪಾರಿಯನ್ನು ಅಡ್ಡಗಟ್ಟಿ ದರೋಡೆ ಮಾಡಿರುವ ಘಟನೆ ಸೋಮವಾರ ವಿನೋಬ ನಗರದಲ್ಲಿ ನಡೆದಿದೆ. ಪಿ ಅಂಡ್ ಟಿ ಕಾಲೊನಿ ನಿವಾಸಿ ಮಂಜುನಾಥ್ ಅವರು ತರಕಾರಿಯನ್ನು ತರಲು ಎಪಿಎಂಸಿ ಮಾರುಕಟ್ಟೆಗೆ ಮುಂಜಾನೆ ನಾಲ್ಕು ಗಂಟೆಗೆ ಹೋಗುವಾಗ ವಿನೋಬನಗರ ಕೆ ಹೆಚ್ ಬಿ ಕಾಲೋನಿಯ ಎಸ್ ಕೆ ಎನ್ ಶಾಲೆ ಬಳಿ ಘಟನೆ ನಡೆದಿದೆ.
ಇಬ್ಬರು ದರೋಡೆಕೋರರು ಮಂಜುನಾಥ್ ಅವರನ್ನು ಅಡ್ಡಗಟ್ಟಿ ಅವರ ಬಳಿ ಇದ್ದ ವಾಚ್ , ಚಿನ್ನದ ಉಂಗುರ, ಚಿನ್ನದ ಸರ ಹಾಗೂ 14,000 ರೂ. ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಮಂಜುನಾಥ್ ಅವರ ಕೈಗೆ ಚಾಕುವಿನಿಂದ ಇರಿದಿದ್ದಾರೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.