ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಜಾಕ್ವೆಲಿನ್ ಪ್ರಿಯಕರ ಎಂದು ಹೇಳಿಕೊಳ್ಳುವ ಸುಖೇಶ್ ಚಂದ್ರಶೇಖರ್ ಜೈಲಿಂದ ಜಾಕ್ವೆಲಿನ್ ಫರ್ನಾಂಡಿಸ್ಗೆ ಸಾಕಷ್ಟು ಲವ್ ಲೆಟರ್ ಬರೆದಿದ್ದಾರೆ.
ಇದೀಗ ಲವ್ ಲೆಟರ್ ಅಲ್ಲ, ಬೆದರಿಕೆ ಪತ್ರ ಬಂದಿದೆ ಎಂದು ಜಾಕ್ವೆಲಿನ್ ಆರೋಪಿಸಿದ್ದಾರೆ. ನನ್ನ ವಿರುದ್ಧ ಸಂಚು ಮಾಡಿದ್ರೆ ನಿನ್ನ ಬಣ್ಣ ಬಯಲು ಮಾಡ್ತೀನಿ ಎಂದು ಸುಖೇಶ್ ಹೆದರಿಸುತ್ತಿರುವುದಾಗಿ ಜಾಕ್ವೆಲಿನ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಸುಖೇಶ್ ವಂಚನೆ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ ಎಂದು ಜಾಕ್ವೆಲಿನ್ ಹೇಳಿದ್ದರು. ತಮ್ಮ ವಿರುದ್ಧದ ಮೊಕದ್ದಮೆಯನ್ನು ಹಿಂಪಡೆಯಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದರು. ಅಷ್ಟೇ ಅಲ್ಲದೆ ಸುಖೇಶ್ ಅವಕಾಶ ಸಿಕ್ಕಾಗಲೆಲ್ಲ ತನ್ನ ಹೆಸರು ಬಳಸುತ್ತಾರೆ ಇದನ್ನು ತಡೆಯಬೇಕು ಎಂದು ನಟಿ ಕೋರ್ಟ್ಗೆ ಮನವಿ ಮಾಡಿದ್ದರು.