ಎಂಪಿಲ್ ಡಿಗ್ರಿ ಮಾಡ್ಕೋಬೇಕು ಅಂತಿದೀರಾ? ಯುಜಿಸಿಯ ಈ ಎಚ್ಚರಿಕೆ ಓದಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಎಂಪಿಲ್ ಅರ್ಥಾತ್ ಮಾಸ್ಟರ್ ಆಫ್ ಫಿಲಾಸಪಿ ಎಂಬ ಉನ್ನತ ಪದವಿ ಹೆಸರು ಕೇಳಿದ್ದಿರಬಹುದು. ಆದರೆ, ಅದಕ್ಕೀಗ ಪದವಿಯ ಮಾನ್ಯತೆ ಇಲ್ಲ. ಈ ಪದವಿಗೆ ತಾನು ಮಾನ್ಯತೆ ತೆಗೆದ ನಂತರವೂ ಕೆಲವು ವಿಶ್ವವಿದ್ಯಾಲಯಗಳು ಪ್ರವೇಶ ನೀಡುತ್ತಿದ್ದು, ಈ ಬಗ್ಗೆ ವಿದ್ಯಾರ್ಥಿಗಳು ಎಚ್ಚರ ವಹಿಸಬೇಕು ಯುನಿವರ್ಸಿಟಿ ಗ್ರಾಂಟ್ ಕಮಿಷನ್ (ಯುಜಿಸಿ) ಹೇಳಿದೆ.

ಯುಜಿಸಿ ನಿಯಮಕ್ಕೆ 2022ರಲ್ಲಿ ಆಗಿರುವ ತಿದ್ದುಪಡಿ ಪ್ರಕಾರ ಉನ್ನತ ಶಿಕ್ಷಣ ಸಂಸ್ಥೆಗಳು ಎಂಪಿಲ್ ಪದವಿ ನೀಡುವಂತಿಲ್ಲ. ಈ ಬಗ್ಗೆ 2022ರ ನವೆಂಬರ್ 7ರಲ್ಲಿ ಗೆಜೆಟ್ ಅಧಿಸೂಚನೆ ಸಹ ಆಗಿದೆ. ಆದರೂ 2023-24ರ ಸಾಲಿಗೆ ಕೆಲವು ವಿಶ್ವವಿದ್ಯಾಲಯಗಳು ಈ ಪದವಿಗೆ ಪ್ರವೇಶ ನೀಡುತ್ತಿರುವ ಮಾಹಿತಿಗಳಿದ್ದು, ವಿದ್ಯಾರ್ಥಿಗಳು ಈ ಪದವಿ ಪಡೆದರೆ ಅದಕ್ಕೆ ಮಾನ್ಯತೆ ಇರುವುದಿಲ್ಲ ಎಂದು ಯುಜಿಸಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!