COVID UPDATES | ಸೋಂಕಿತರ ಸಂಪರ್ಕಿತರ ಪರೀಕ್ಷೆ, ಮೃತಪಟ್ಟವರ ಅಂಕಿಅಂಶ ದಾಖಲಿಸಲು ಸುತ್ತೋಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸೋಂಕಿತರ ಸಂಪರ್ಕಿತರನ್ನು ಪರೀಕ್ಷಿಸುವುದು, ಟೆಲಿ ಐಸಿಯು ಬಳಕೆ, ಸೋಂಕಿನಿಂದಾಗಿ ಸಾವನ್ನಪ್ಪಿದವರ ಲೆಕ್ಕಪರಿಶೋಧನೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದೆ.
ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ ಸುತ್ತೋಲೆ ನೀಡಿದ್ದು, ಕೋವಿಡ್ -೧೯ ಅನ್ನು ಮೊದಲೇ ಪತ್ತೆಹಚ್ಚಲು ಮತ್ತು ರೋಗಿಗೆ ಆರಂಭಿಕ ಚಿಕಿತ್ಸೆಯನ್ನು ಪ್ರಾರಂಭಿಸಲು ಪರೀಕ್ಷೆ ಆಧಾರವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಹಿಂದೆ ನೀಡಲಾದ ಉದ್ದೇಶಿತ ಪರೀಕ್ಷಾ ಮಾನದಂಡಗಳ ಜೊತೆಗೆ, ಎಲ್ಲಾ ರೋಗಲಕ್ಷಣದ ನಿಕಟ ಸಂಪರ್ಕಿತರನ್ನು ಸಹ ಕೋವಿಡ್ ೧೯ ಗಾಗಿ ಪರೀಕ್ಷಿಸಬೇಕು ಎಂದು ಹೇಳಿದೆ.
ಇದಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡಲು ಕೆಲವು ಐಸಿಯು ಹಾಸಿಗೆಗಳು ಸೇರಿದಂತೆ ಕೋವಿಡ್-೧೯ ಐಸೋಲೇಷನ್ ವಾರ್ಡ್ ಸ್ಥಾಪಿಸುವಂತೆ ಸಲಹೆ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!