ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಿಂದ ಎರಡು ‘ಪ್ರಳಯ್ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದು, ಶತ್ರು ಪಾಳಯದಲ್ಲಿ ನಡುಕ ಹುಟ್ಟಿಸಿದೆ.
‘ಪ್ರಳಯ್’ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಅರೆ-ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, ಇದು ಹೆಚ್ಚಿನ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಅತ್ಯಾಧುನಿಕ ಸಂಚರಣೆ ವ್ಯವಸ್ಥೆಯನ್ನು ಒಳಗೊಂಡಿದೆ.ಇದು ವಿವಿಧ ಗುರಿಗಳ ವಿರುದ್ಧ ಹಲವು ವಿಧದ ಸಿಡಿತಲೆಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.
“ಹಾರಾಟ-ಪರೀಕ್ಷೆಯ ಸಂದರ್ಭದಲ್ಲಿ ಟ್ರ್ಯಾಕಿಂಗ್ ಸಂವೇದಕಗಳಿಂದ ದೃಢೀಕರಿಸಲ್ಪಟ್ಟಂತೆ ಎರಡೂ ಕ್ಷಿಪಣಿಗಳು ಉದ್ದೇಶಿತ ಪಥವನ್ನು ಅನುಸರಿಸಿದವು ಮತ್ತು ಗುರಿಯ ಬಗ್ಗೆ ಸ್ಪಷ್ಟತೆ ಹೊಂದಿದ್ದವು” ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

