May 2, 2026
Saturday, May 2, 2026
spot_img

ಕೇರಳದಲ್ಲಿ ಮತ್ತೆ ಆತಂಕ: ಮೂರೂವರೆ ವರ್ಷದ ಪುಟಾಣಿಯ ಸಾವಿಗೆ ಕಾರಣ ‘ಶಿಗೆಲ್ಲಾ’ ದೃಢ

ಹೊಸದಿಗಂತ ಡಿಜಿಟಲ್ ಡೆಸ್ಕ್:


ಅನಾರೋಗ್ಯದಿಂದ ಬಳಲಿ ಕಳೆದ ಭಾನುವಾರ ಸಾವನ್ನಪ್ಪಿದ್ದ ಕೆರಳದ ಕೋಝಿಕ್ಕೋಡ್ ಕುಟ್ಟಿಕ್ಕತ್ತೂರಿನ ಅನಕ್ಕುಳಿಕ್ಕರದ ಮೂರುವರೆ ವರ್ಷದ ಬಾಲಕಿಯ ಸಾವಿಗೆ ಶಿಗೆಲ್ಲ ಸೋಂಕು ಕಾರಣ ಎಂಬುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ.


ಇಂದು ವೈದ್ಯಕೀಯ ವರದಿ ಬಂದಿದ್ದು, ಮಗು ಸಾವಿಗೆ ಇದೇ ಸೋಂಕು ಕಾರಣ ಎಂಬುದು ಖಚಿತವಾಗಿದೆ.
ಮಗು ಕಲಿಯುತ್ತಿದ್ದ ಅಂಗನವಾಡಿಯ ಮೂವರು ಮಕ್ಕಳು ಕೂಡಾ ಇದೇ ರೋಗ ಲಕ್ಷಣ ಹೊಮದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದಲ್ಲದೆ ಅನಕ್ಕುಳಿಕ್ಕರ ಪ್ರದೇಶದಲ್ಲಿ ಐವರಿಗೆ ರೋಗ ಲಕ್ಷಣ ಕಂಡುಬಂದಿದ್ದು, ಆರೋಗ್ಯ ಇಲಾಖೆ ಈ ಪ್ರದೇಶದಲ್ಲಿ ಸೋಂಕು ಹರಡದಂತೆ ವ್ಯಾಪಕ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.


ಏನಿದು ಶಿಗೆಲ್ಲಾ?
ಶಿಗೆಲ್ಲವು ಬ್ಯಾಕ್ಟೀರಿಯಾದಿಂದ ಹರಡುವ ಜೀರ್ಣಾಂಗ ವ್ಯವಸ್ಥೆ ಮೇಲೆ ಪರಿಣಾಮ ಬೀರುವ ಅಪಾಯಕಾರಿ ಕಾಯಿಲೆ. ಕಲುಷಿತ ನೀರು ಮತ್ತು ಆಹಾರದ ಮೂಲಕ ಇದು ಹರಡುತ್ತದೆ. ಜ್ವರ, ಹೊಟ್ಟೆ ನೋವು, ವಾಂತಿ, ಆಯಾಸ ಮತ್ತು ನಿರ್ಜಲೀಕರಣದ ಲಕ್ಷಣಗಳು ಲಕ್ಷಣಗಳಾಗಿವೆ. ಈ ರೋಗವು ವಿಶೇಷವಾಗಿ ಐದು ವರ್ಷದೊಳಗಿನ ಮಕ್ಕಳಲ್ಲಿ ಗಂಭೀರ ಅಪಾಯ ತರುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !