ಅಯೋಧ್ಯ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಹೆಸರು : ವಾಲ್ಮೀಕಿ ಸಮಾಜದ ಮುಖಂಡರ ಹರ್ಷ

ಹೊಸದಿಗಂತ ವರದಿ ಬಾಗಲಕೋಟೆ :

ಅಯೋಧ್ಯ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ವಿಮಾನ ನಿಲ್ದಾಣಕ್ಕೆ ಸಂತರು, ಮಹಾನ್ ಮಾನವತವಾದಿ ಮಹರ್ಷಿ ವಾಲ್ಮೀಕಿ ಅವರ ಹೆಸರನ್ನ ನಾಮಕರಣ ಮಾಡಿರುವುದಕ್ಕೆ ಬಾಗಲಕೋಟೆ ಜಿಲ್ಲಾ ವಾಲ್ಮೀಕಿ ಸಮಾಜದ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾ ವಾಲ್ಮೀಕಿ ಸಮಾಜದ ಮುಖಂಡರು, ದೇಶದ ತೀರ್ಥಕ್ಷೇತ್ರ, ಶ್ರೀರಾಮನ ಜನ್ಮ ಭೂಮಿ ಅಯೋಧ್ಯ ನಗರದಲ್ಲಿ ನೂತನವಾಗಿ ಕೇಂದ್ರ ಸರ್ಕಾರ ಹಾಗೂ ಉತ್ತರ ಪ್ರದೇಶ ಸರ್ಕಾರ ಸಹಯೋಗದಲ್ಲಿ ನಿರ್ಮಾಣಗೊಂಡ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಅವರ ಹೆಸರನ್ನ ನಾಮಕರಣ ಮಾಡುವ ಮೂಲಕ ವಾಲ್ಮೀಕಿ ಸಮಾಜಕ್ಕೆ ನ್ಯಾಯ ನೀಡಿದ್ದಾರೆ.

ಹಾಗಾಗಿ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ನೇತೃತ್ವಯಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಜಿಲ್ಲಾ ವಾಲ್ಮೀಕಿ ಸಮಾಜದ ಮುಖಂಡರಾದ ಶಂಭುಗೌಡ ಪಾಟೀಲ, ಮಲ್ಲಿಕಾರ್ಜುನ್ ಸುರಪುರ ,ರಾಜು ನಾಯಕ, ಕೃಷ್ಣ ಪಾಟೀಲ, ಪ್ರಕಾಶ್ ಗುಳೇದಗುಡ್ಡ, ಡಾ. ಕೃಷ್ಣ ಚೌದರಿ, ಮುತ್ತಪ್ಪ ಪೂಜಾರಿ, ಪ್ರಕಾಶ್ ನಾಯ್ಕರ್, ಯಲ್ಲಪ್ಪ ಕ್ಯಾದಿಗೇರಿ, ಲಕ್ಷ್ಮಣ ತಳವಾರ, ಗಂಗಾಧರ ಮರದಾನಿ, ಡಿ. ಆರ್. ರಾಮತಾಳ, ತಿಪ್ಪಣ್ಣ ಸಂಜೀವಪ್ಪಗೋಳ, ವಾಯ್.ಆರ್. ಪಾಟೀಲ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!