ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಒಂದು ವಾರದಲ್ಲಿ 700 ಕ್ಕೂ ಹೆಚ್ಚು ಡ್ರಿಂಕ್ ಆಂಡ್ ಡ್ರೈವ್ (Drink and Drive) ಪ್ರಕರಣಗಳು ದಾಖಲಾಗಿವೆ.
ಡಿಸೆಂಬರ್ 21 ರಿಂದ ಇಲ್ಲಿಯವರೆಗೆ ನಗರದಾದ್ಯಂತ ಒಟ್ಟಾರೆ 717 ಡ್ರಿಂಕ್ ಆಂಡ್ ಡ್ರೈವ್ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಹೆಚ್ಚು ದ್ವಿಚಕ್ರ ವಾಹನ ಚಾಲಕರೇ ಇದ್ದಾರೆ. ಸಂಚಾರ ಪೊಲೀಸರು ಒಟ್ಟಾರೆ 27 ಸಾವಿರಕ್ಕೂ ಹೆಚ್ಚು ವಾಹನಗಳನ್ನು ತಡೆದು ಪರಿಶೀಲನೆ ಮಾಡಿದ್ದಾರೆ. ಇದರಲ್ಲಿ 717 ಮಂದಿ ಕುಡಿದು ಗಾಡಿ ಓಡಿಸಿದ್ದಾರೆ.
ಬೆಂಗಳೂರು ದಕ್ಷಿಣ ವಿಭಾಗದಲ್ಲಿಯೇ ಒಟ್ಟಾರೆ ನಾಲ್ಕು ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹೊಸ ವರ್ಷಾಚರಣೆಯಂದು ಈ ಸಂಖ್ಯೆ ಇನ್ನೂ ಹೆಚ್ಚಾಗಿರುವ ಸಾಧ್ಯತೆ ಇದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.