ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಇಡುಕ್ಕಿ ಚಿನ್ನಾರ್ ವನ್ಯಜೀವಿ ಅಭಯಾರಣ್ಯದಲ್ಲಿ ರಾಜ್ಯದಲ್ಲೇ ಮೊತ್ತಮೊದಲ ಯುರೇಷಿಯನ್ ನೀರಿನ ಎಮ್ಮೆ ಪತ್ತೆಯಾಗಿದೆ.
ಲುಟ್ರಾ ಲುಟ್ರಾ ವೈಜ್ಞಾನಿಕ ಹೆಸರು ಹೊಂದಿರುವ ಈ ಸಸ್ತನಿ ಈಗ ಕೇರಳದ ಸಸ್ತನಿಗಳ ಪಟ್ಟಿಯಲ್ಲಿ ಸೇರಿಕೊಂಡಿದೆ.
ನಾಚಿಕೆ ಸ್ವಭಾವ, ನಯವಾದ ದೇಹ, ಸಣ್ಣ ಉಗುರುಗಳನ್ನು ಹೊಂದಿರುವ ಈ ನೀರೆಮ್ಮೆ, ರಾತ್ರಿ ಮೇಳೆ ಮಾತ್ರ ಕಾಣಸಿಗುತ್ತದೆ. ಕೊಲ್ಲಿಯ ಸಣ್ಣ ಹೊಳೆಗಳ ಬಳಿ ಇವು ಕಂಡುಬರುತ್ತವೆ. ರಾತ್ರಿ ವೇಳೆ ಬೇಟೆಯಾಡುವುದು ಇದರ ಸ್ವಭಾವ ಎಂದು ಇದರ ಬಗ್ಗೆ ಅಧ್ಯಯನ ನಡೆಸಿರುವ ಕೇರಳ ಕೃಷಿ ವಿಶ್ವವಿದ್ಯಾನಿಲಯದ ಅರಣ್ಯ ಕಾಲೇಜಿನ ವನ್ಯಜೀವಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಪಿಒ ನೇಮೀರ್ ನೇತೃತ್ವದ ತಂಡ ಮಾಹಿತಿ ನೀಡಿದೆ.
ಪಶ್ಚಿಮ ಘಟ್ಟಗಳಲ್ಲಿ ಈ ಹಿಂದೆ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ನೀರೆಮ್ಮೆ ಉಪಸ್ಥಿತಿಯನ್ನು ವರದಿ ಮಾಡಿತ್ತು. ಇವು ಕರ್ನಾಟಕದ ಮಡಿಕೇರಿ, ತಮಿಳ್ನಾಡಿನ ಊಟಿ ಮತ್ತು ಕೊಡೈಕೆನಾಲ್‌ಗಳಲ್ಲಿ ಕೂಡಾ ಕಂಡುಬಂದಿವೆ.