ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತದ ಪವಿತ್ರ ಯಾತ್ರಾ ಸ್ಥಳ ಶಬರಿಮಲೆ ಅಯ್ಯಪ್ಪ ಸನ್ನಿಧಾನವನ್ನು ಕಸಮುಕ್ತಗೊಳಿಸಲು ತಿರುವಾಂಕೂರು ದೇವಸ್ವಂ ಮಂಡಳಿ ಪಣತೊಟ್ಟಿದೆ.
ಇಲ್ಲೀಗ ಪ್ರತಿ ನಿತ್ಯ ಪ್ರತ ತಾಸಿಗೊಮ್ಮೆ ಸನ್ನಿಧಾನ ಹಾಗೂಸುತ್ತಮುತ್ತಲಿನ ಪರಿಸರವನ್ನು ಸಮರೋಪಾದಿಯಲ್ಲಿ ಸ್ವಚ್ಛಗೊಳಿಸಲಾಗುತ್ತಿದೆ.
ಇದಲ್ಲದೆ ದಿನನಿತ್ಯ ಬೆಳಿಗ್ಗೆ ಒಂಬತ್ತರಿಂದ ಮುಂದಿನ ಒಂದು ಗಂಟೆಗಳ ಕಾಲ ಸನ್ನಿಧಾನ, ಇಲ್ಲಿನ ಪರಿಸರ ಸ್ವಚ್ಛಗೊಳಿಸಲು ಮೀಸಲಿಡಲಾಗಿದೆ. ಇದಕ್ಕೆ ದೇವಸ್ವಂ ಮಂಡಳಿಯ ಸಿಬ್ಬಂದಿ, ಇತರ ಇಲಾಖಾ ಸಿಬ್ಬಂದಿ, ಅಯ್ಯಪ್ಪ ಸೇವಾ ಸಂಘದ ಕಾರ್ಯಕರ್ತರು, ವಿಶುದ್ಧಿ ಸೇನೆಯ ಸದಸ್ಯರು ಸಾಥ್ ನೀಡುತ್ತಿದ್ದಾರೆ.