Friday, March 1, 2024

ದೇಶದಲ್ಲಿ ಕೋವಿಡ್ ಕಾಟ: ಹೊಸ ಕೇಸ್‌ಗಳಲ್ಲಿ ಈಗ ಕರ್ನಾಟಕವೇ ಫಸ್ಟು…

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಇದೀಗ ದೇಶದಲ್ಲಿಯೇ ಅತೀ ಹೆಚ್ಚು ಹೊಸ ಕೋವಿಡ್ ಕೇಸ್ ಹೊಂದಿರುವ ರಾಜ್ಯ ಎಂಬ ಕುಖ್ಯಾತಿಗೆ ಒಳಗಾಗಿದೆ.

ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ಡಿ.2ರ ವರೆಗಿನ ಅಂಕಿ ಅಂಶಗಳ ಪ್ರಕಾರ ಕರ್ನಾಟಕದಲ್ಲಿ 245 ಹೊಸ ಕೇಸ್‌ಗಳು ದಾಖಲಾಗಿವೆ, ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 1245ನಷ್ಟಿದ್ದು, ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ.

ಇನ್ನು ಕೇರಳದಲ್ಲಿ 157 ಹೊಸ ಕೇಸ್‌ಗಳು ದಾಖಲಾಗಿದೆ. ಆದರೆ ಸಕ್ರಿಯ ಪ್ರಕರಣಗಳ ಸಂಖ್ಯೆ 1712 ಇದ್ದು, ದೇಶದಲ್ಲಿ ಕೇರಳದಲ್ಲಿಯೇ ಹೆಚ್ಚು ಆಕ್ಟೀವ್ ಕೇಸ್‌ಗಳಿವೆ.

ಹಿಮಾಚಲ ಪ್ರದೇಶ, ಮೇಘಾಲಯ, ಮಿಜೋರಾಂ, ತ್ರಿಪುರ, ಸಿಕ್ಕಿಮ್, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಅಂಡಮಾನ್, ಲಕ್ಷದ್ವೀಪಗಳಲ್ಲಿ ಶೂನ್ಯ ಪ್ರಕರಣಗಳಿವೆ. ಆಂಧ್ರ ಪ್ರದೇಶದಲ್ಲಿ 119, ಮಹಾರಾಷ್ಟ್ರದಲ್ಲಿ 731 ಪ್ರಕರಣಗಳಿವೆ.

ಸೋಮವಾರ ಸಂಜೆಯ ವರೆಗಿನ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 636 ಕೊರೊನಾ ಪ್ರಕರಣಗಳು ದಾಖಲಾಗಿವೆ. ಮೂರು ಸಾವು ಸಂಭವಿಸಿದ್ದು, ಈ ಪೈಕಿ ಕೇರಳದಲ್ಲಿ ಎರಡು ಸಾವುಗಳು ವರದಿಯಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!