31 ವರ್ಷ ಹಿಂದೆ ನಡೆದ ಪ್ರಕರಣ ಮರಳಿ ಕೆದಕಿರುವುದು ರಾಜ್ಯ ಸರ್ಕಾರದ ದೊಡ್ಡ ನಿಚತನ: ಪ್ರಹ್ಲಾದ್ ಜೋಶಿ

ಹೊಸ ದಿಗಂತ ವರದಿ, ಹುಬ್ಬಳ್ಳಿ:

ರಾಮಜನ್ಮ ಭೂಮಿ ಹೋರಾಟ ಹಿನ್ನೆಲೆ ಕಳೆದ ೩೧ ವರ್ಷ ಹಿಂದೆ ನಡೆದ ಪ್ರಕರಣ ಮರಳಿ ಕೆದಕಿರುವುದು ರಾಜ್ಯ ಸರ್ಕಾರದ ದೊಡ್ಡ ನಿಚತನವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸರ್ಕಾರ ವಿರುದ್ಧ ಹರಿಹಾಯ್ದರು.

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರಿಗೆ ರಾಮಮಂದಿರ ನಿರ್ಮಾಣ ಆಗುತ್ತಿರುವುದರ ಬಗ್ಗೆ ಯಾಕೆ ಬೇಜಾರು? ಹೊಟ್ಟೆ ಕಿಚ್ಚು ಯಾಕೆ ಎಂಬುವುದು ತಿಳಿಸಬೇಕು. ಏನು ಮಾಡದ ಅಮಾಯಕ ಹೋರಾಟಗಾರರನ್ನು ವೃದ್ಯಾಪ್ಯ ವಯಸ್ಸಿನಲ್ಲಿ ಬಂಧಿಸಿದ್ದಾರೆ ಎಂದರು.

ಹಳೇ ಹುಬ್ಬಳ್ಳಿ ಪ್ರಕರಣ ಸಂಬಂಧಿಸಿದ ದೇಶ ದ್ರೋಹಿಗಳ ಬಿಡಿಸಲು ಪತ್ರ ಬರೆಯುತ್ತಾರೆ, ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿ ಪ್ರಕರಣ ಕೈಬಿಡಲು ಮತ್ತು ಪಿಎಫ್‌ಐ ಕಾರ್ಯಕರ್ತರ ಮೇಲಿದ್ದ ಪ್ರಕರಣ ಹಿಂಪಡೆಯಲು ಮುಂದಾಗುತ್ತಾರೆ. ಇದೇಲ್ಲವೂ ಮುಸ್ಲಿಂ ಸಮುದಾಯದ ತೃಷ್ಟೀಕರಣ ಪರಾಕಾಷ್ಠೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಆದೇಶ ಮೇರೆಗೆ ಶಹರ ಪೊಲೀಸ್ ಠಾಣಾ ಅಧಿಕಾರಿ ಆಸಕ್ತಿ ವಹಿಸಿಕೊಂಡು ಹೋರಾಟಗಾರರ ಬಂಸಿದ್ದಾರೆ. ರಾಜ್ಯ ಜನರ ನಿಮ್ಮನ್ನು ಆಯ್ಕೆ ಮಾಡಿದ್ದು, ಮನಬಂದಂತೆ ಆಡಳಿತ ನಡೆಸಲು ಅಲ್ಲ. ಎಲ್ಲ ಸಮುದಾಯ ಹಿತದೃಷ್ಟಿ ಕಾಯಲು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವ ರಾಜ್ಯದಲ್ಲಿ ಇದ್ದಾರೆ? ಸಿದ್ದರಾಮಯ್ಯ ಅವರ ನಿರ್ದೇಶನದ ಮೇಲೆ ಇಂತಹ ಘಟನೆಗಳು ನಡೆಯುತ್ತಿವೆ. ಹಿಂದಿನ ಪ್ರಕರಣ ಆರೋಪಿ ಬಂಧಿಸುತ್ತಿರುವ ಇವರು ತಮ್ಮ ಪಕ್ಷದಲ್ಲಿರುವ ಕಳ್ಳರು ಹಾಗೂ ಕಾಕರುಗಳನ್ನು ಮೊದಲು ಬಂಸಲಿ. ಮುಸ್ಲಿಂ ಸಮುದಾಯ ಪ್ರೀತಿ ಹಾಗೂ ಹಿಂದೂ ಸಮುದಾಯ ದ್ವೇಷಿಸುವುದು ಸರಿಯಲ್ಲ ಎಂದು ತಿಳಿಸಿದರು.

ಹಿಂದೆ ಬಿಜೆಪಿ ಸರ್ಕಾರವಿದ್ದಾಗ ರೈತ ಹಾಗೂ ರಾಮಜನ್ಮ ಭೂಮಿ ಹೋರಾಟಗಾರರ ಮೇಲಿನ ಪ್ರಕರಣ ಹಿಂಪಡೆಯಲಾಗಿದೆ. ೧೯೯೨ ರ ಹೋರಾಟ ಪ್ರಕರಣ ನಮ್ಮ ಗಮನಕ್ಕೆ ಬಂದಿಲ್ಲ. ಈಗ ಬಿಜೆಪಿ ಇದರ ಜವಾಬ್ದಾರಿ ತೆಗೆದುಕೊಂಡಿದ್ದು, ಹೋರಾಟಗಾರರ ಪರವಾಗಿ ನಿಲ್ಲಲಿದೆ ಎಂದರು.

ಎಂ. ಬಿ. ಪಾಟೀಲ ಮೊದಲು ತಮ್ಮ ಪಕ್ಷದ ಪರಿಸ್ಥಿತಿ ಅರಿಯಲಿ. ಶ್ರೀರಾಮ ಚಂದ್ರ ಇರುವುದು ಕಾಲ್ಪನಿಕ, ರಾಮಮಂದಿರ ಅಸಾಧ್ಯ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಈಗಲೂ ಸಹ ಮತ ಕ್ಕಾಗಿ ರಾಮಮಂದಿರ ನಿರ್ಮಾಣ ಒಪ್ಪಿಕೊಳ್ಳಲು ನಿಮಗೆ ಆಗುತ್ತಿಲ್ಲ. ನಿಮ್ಮ ಸ್ಟ್ಯಾಂಡ್ ಏನೆಂಬುವುದು ತಿಳಿಸಿ ಎಂದು ಹರಿಹಾಯ್ದರು.

ರಾಮ ಎಂಬ ಹೆಸರು ಇಟ್ಟುಕೊಂಡವರು ಎಲ್ಲರೂ ರಾಮನಂತೆ ನಡೆದುಕೊಳ್ಳುವುದಿಲ್ಲ. ರಾವಣನನ್ನಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಅವರ ಸಿದ್ದಾರಾಮಯ್ಯ ನವರೇ ನಮ್ಮ ರಾಮ ಎಂಬ ಹೇಳಿಕೆ ಪ್ರತಿಕ್ರಿಯಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!