ಮತ್ತೆ ಮೀ ಟೂ ಸದ್ದು: ನಟ ಕಮಲ ಹಾಸನ್​ ವಿರುದ್ಧ ಚಿನ್ಮಯಿ ಶ್ರೀಪಾದ ಕೆಂಡಾಮಂಡಲ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡಿದ್ದ ಮೀ ಟೂ ಅಭಿಯಾನ ಮತ್ತೆ ಕೇಳಿವಬರುತ್ತಿದ್ದು, ಇದೀಗ ಖ್ಯಾತ ಗಾಯಕಿ ಮತ್ತು ಡಬ್ಬಿಂಗ್​ ಆರ್ಟಿಸ್ಟ್ ಚಿನ್ಮಯಿ ಶ್ರೀಪಾದ ನಟ ಕಮಲ ಹಾಸನ್​ ವಿರುದ್ಧ ಕಿಡಿ ಕಾರಿದ್ದಾರೆ.

ಇದಕ್ಕೆ ಕಾರಣ ಕಮಲ ಹಾಸನ್​ ಅವರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ತಮಿಳಿನ ಜನಪ್ರಿಯ ಗೀತರಚನಕಾರ ವೈರಮುತ್ತು ಅವರ ಜೊತೆ ವೇದಿಕೆ ಹಂಚಿಕೊಂಡಿದ್ದು, ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹೋಗಿರುವುದೇ ಇಷ್ಟೆಲ್ಲಾ ಗಲಾಟೆಗೆ ಕಾರಣವಾಗಿದೆ.

ಚಿನ್ಮಯಿ ಅವರು, ಈ ಹಿಂದೆ ವೈರಮುತ್ತು ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. 2018ರಲ್ಲಿ ಈ ಘಟನೆ ನಡೆದಿತ್ತು. ವೈರಮುತ್ತು ಅವರ ವಿರುದ್ಧ ಭಾರಿ ಆಪಾದನೆ ಮಾಡಿದ್ದದರು ಚಿನ್ಮಯಿ. ಆದರೆ ಇದೀಗ ವೈರಮುತ್ತು ಅವರ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಕಮಲ ಹಾಸನ್​ ಅವರು ಹೋಗಿರುವುದು ಗಾಯಕಿಯ ಕೋಪಕ್ಕೆ ಕಾರಣವಾಗಿದೆ. ಪುಸ್ತಕ ಬಿಡುಗಡೆ ಸಮಾರಂಭದ ಫೋಟೋ ಶೇರ್ ಮಾಡಿರುವ ಚಿನ್ಮಯಿ,​ ಈ ಹಿಂದೆ ಕೂಡ ಕಮಲ ಹಾಸನ್ ಇದೇ ರೀತಿ ಮಾಡಿದ್ದರು. ಅವರ ಮಗಳೇ ಮೀ ಟೂ ಅಭಿಯಾನವನ್ನು ಆರಂಭಿಸಿದವರು. ವೈರಮುತ್ತ ಅವರ ವಿರುದ್ಧ ಎಷ್ಟೊಂದು ಆಪಾದನೆ ಇದ್ದರೂ ಈಗ ಮತ್ತೊಮ್ಮೆ ಕಮಲ ಹಾಸನ್ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಕಮಲ ಹಾಸನ್ ಅವರಂತಹ ಸ್ಟಾರ್​ಗಳು ಇಂಥ ಮೀ ಟೂ ಆರೋಪ ಹೊತ್ತವರಿಗೆ ಬೆಂಬಲ ನೀಡುತ್ತಿರುವುದು ಸರಿಯಲ್ಲ. ತಮಿಳುನಾಡಿನ ಅತ್ಯಂತ ಶಕ್ತಿಶಾಲಿ ಜನರು ನನಗೆ ಕಿರುಕುಳ ನೀಡಿದವರ ಜೊತೆ ನಿಂತಿದ್ದಾರೆ. ಮತ್ತೊಂದೆಡೆ, ನನ್ನನ್ನು ಇಂಡಸ್ಟ್ರಿಯಿಂದ ನಿಷೇಧಿಸಲಾಯಿತು, ನನ್ನ ವೃತ್ತಿಜೀವನ ಮುಗಿದಿದೆ. ಅಪರಾಧಿಗಳನ್ನು ಬೆಂಬಲಿಸುವ ಮತ್ತು ಉತ್ತೇಜಿಸುವ ಮತ್ತು ಪ್ರಾಮಾಣಿಕರನ್ನು ಬಂಧಿಸುವ ಸಂಪೂರ್ಣ ಪರಿಸರ ವ್ಯವಸ್ಥೆಯು ನಾಶವಾಗುತ್ತದೆ ಎಂದು ಹೇಳೀರುವ ಗಾಯಕಿ, ನನ್ನ ಆಸೆ ಈಡೇರುವವರೆಗೆ ನಾನು ಪ್ರಾರ್ಥಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ. ಇದನ್ನು ಬಿಟ್ಟರೆ ನಾನೇನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!