ಪುರಿ ಜಗನ್ನಾಥ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಒಡಿಶಾದ ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿಯಾಗಿದ್ದು, ಹಲವು ರೀತಿಯ ಬಟ್ಟೆಗಳಿಗೆ ನಿರ್ಬಂಧ ಹೇರಲಾಗಿದೆ.
ಹಾಫ್​ ಪ್ಯಾಂಟ್​, ಶಾರ್ಟ್ಸ್​, ರಿಪ್ಡ್​ ಜೀನ್ಸ್​, ಸ್ಕರ್ಟ್​ ಮತ್ತು ಸ್ಲೀವ್​ಲೆಸ್​ ಡ್ರೆಸ್​ಗಳನ್ನು ಧರಿಸಿದವರಿಗೆ ಪ್ರವೇಶಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಭಕ್ತರು ದೇವಾಲಯಕ್ಕೆ ಪ್ರವೇಶಿಸಲು ಸಭ್ಯ ಉಡುಪು ಗಳನ್ನು ಧರಿಸಬೇಕು ಎಂದು ತಿಳಿಸಲಾಗಿದೆ. ಹೊಸ ನಿಯಮವು ಜಾರಿಗೆ ಬಂದಂತೆ, ಪುರುಷರು ಧೋತಿಗಳು, ಪಂಚೆಗಳನ್ನು ಧರಿಸಿ 12 ನೇ ಶತಮಾನದ ದೇಗುಲವನ್ನು ಪ್ರವೇಶಿಸುತ್ತಿದ್ದಾರೆ, ಹಾಗೆಯೇ ಮಹಿಳೆಯರು ಹೆಚ್ಚಾಗಿ ಸೀರೆ ಅಥವಾ ಸಲ್ವಾರ್ ಕಮೀಜ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಶ್ರೀ ಜಗನ್ನಾಥ ದೇವಾಲಯದ ಆಡಳಿತವು (SJTA) ಹೆಚ್ಚಿನ ಭಕ್ತರು ಅಲ್ಲಿಂದ ದೇವಾಲಯಕ್ಕೆ ಬರುವುದರಿಂದ ಜನರಿಗೆ ಡ್ರೆಸ್ ಕೋಡ್ ಬಗ್ಗೆ ಅರಿವು ಮೂಡಿಸಲು ಹೋಟೆಲ್‌ಗಳಿಗೂ ತಿಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇವಸ್ಥಾನದೊಳಗೆ ಗುಟ್ಕಾ ಅಥವಾ ಯಾವುದೇ ತಂಬಾಕು ಉತ್ಪನ್ನಗಳನ್ನು ತಿನ್ನುವುದನ್ನು ನಿಷೇಧಿಸಲಾಗಿದೆ. ಜೊತೆಗೆ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ನಿಷೇಧಿಸಲಾಗಿದೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!