ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದ ದೇವರಪಲ್ಲಿ ಮಂಡಲ್‌ನ ಬಂಡಪುರಂ ಮೇಲ್ಸೇತುವೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ.
ಅತ್ಯಂತ ವೇಗವಾಗಿ ಬಂದ ಕಾರ್ ಡಿವೈಡರ್ ಮೇಲಿಂದ ಹಾರಿ ಪಕ್ಕದ ರಸ್ತೆಗೆ ಬಂದು ಮತ್ತೊಂದು ಕಾರ್‌ಗೆ ಡಿಕಿ ಹೊಡೆದಿದೆ. ಅಪಘಾತದಲ್ಲಿ ಮಗು ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅತಿ ವೇಗದ ಚಾಲನೆಯಲ್ಲಿದ್ದ ಕಾರ್ ನಿಯಂತ್ರಣ ತಪ್ಪಿ ಡಿವೈಡರ್ ಮೇಲಿಂದ ಪಕ್ಕದ ರಸ್ತೆಗೆ ಹಾರಿದೆ. ನಂತರ ಎದುರು ಬರುತ್ತಿದ್ದ ಕಾರ್‌ಗೆ ಡಿಕ್ಕಿಯಾಗಿದೆ. ಕಾರ್‌ನಲ್ಲಿದ್ದ ಮಗು ಸೇರಿ ಮೂರು ಮೃತಪಟ್ಟಿದ್ದಾರೆ, ಇನ್ನು ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಕ್ರೇನ್ ಮೂಲಕ ಎರಡು ಕಾರ್‌ಗಳನ್ನು ರಸ್ತೆಯಿಂದ ಪಕ್ಕಕ್ಕೆ ತಳ್ಳಿದ್ದಾರೆ.
Viewer discretion advised:
At least three people including a baby got killed in a road accident on Deverapalli highway in #AndhraPradesh. A speeding car lost control, rammed into another vehicle in the opposite lane.
Follow us @NewsMeter_In @CoreenaSuares2 pic.twitter.com/GfLPgURqg7
— SriLakshmi Muttevi (@SriLakshmi_10) January 2, 2024