ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಪಾನ್ನಲ್ಲಿ ಹೊಸ ವರ್ಷದ ದಿನದಂದೇ 155 ಬಾರಿ ಭೂಮಿ ಕಂಪಿಸಿದ್ದು, ಸಾವಿನ ಸಂಖ್ಯೆ 57ಕ್ಕೆ ಏರಿಕೆಯಾಗಿದೆ.
ನೂರಾರು ಕಟ್ಟಡಗಳು ನೆಲಸಮವಾಗಿದ್ದು, ಸಾವಿರಾರು ಮಂದಿ ಸಂತ್ರಸ್ತರಾಗಿದ್ದಾರೆ. ಸೋಮವಾರ ಮಧ್ಯಾಹ್ನ ಇಶಿಕಾವ ಪ್ರದೇಶದಲ್ಲಿ 7.6 ತೀವ್ರತೆಯ ಭೂಕಂಪನ ಉಂಟಾಗಿತ್ತು. ಇದರಿಂದಾಗಿ ನೊಟೊ ಪೆನಿನ್ಸುಲಾ ತೀವ್ರ ಹಾನಿಗೀಡಾಗಿದೆ. ಜಪಾನ್ ಮತ್ತೆ ಸುನಾಮಿ ಭೀತಿ ಎದುರಿಸುವ ಸಾಧ್ಯತೆ ಇದೆ.
ರಸ್ತೆ ಸಂಪರ್ಕ, ವಿದ್ಯುತ್ ಸಂಪರ್ಕ ಕಡಿತದಿಂದ ಜನ ಪರದಾಡಿದ್ದಾರೆ. ವಿಪತ್ತು ತುರ್ತು ಸಭೆ ನಡೆದಿದ್ದು, ಹಾನಿಗೀಡಾದ ಪ್ರದೇಶಕ್ಕೆ ತುರ್ತು ನೆರವು ನೀಡಲಾಗುತ್ತಿದೆ. ರಸ್ತೆಗಳು ಸಂಪೂರ್ಣವಾಗಿ ಹಾಳಾಗಿರುವ ಕಾರಣ ವಾಯುಮಾರ್ಗದ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.