ಹೊಸದಿಗಂತ ವರದಿ ಅಂಕೋಲಾ:
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೋರ್ವಳಿಗೆ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೋರ್ವ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಮಾದನಗೇರಿ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದೆ.
ರೈಲು ಸಂಖ್ಯೆ 11098 ಪೂನಾ ಎಕ್ಸಪ್ರೆಸ್ ರೈಲಿನಲ್ಲಿ ಜನವರಿ 2 ರಂದು ಬೆಳಿಗ್ಗೆ 7.20 ಕ್ಕೆ ಈ ಘಟನೆ ನಡೆದಿದ್ದು ಕನ್ಯಾಕುಮಾರಿಯ 22 ರ ಹರೆಯದ ಯುವತಿಯೊಂದಿಗೆ ಕೇರಳ ಕಣ್ಣೂರಿನ ಹಾಲಿ ಮಹಾರಾಷ್ಟ್ರದ ಸಾಂಗ್ಲಿ ಅರೋಡೆಯಲ್ಲಿ ವಾಸವಾಗಿರುವ ದತ್ತಾತ್ರೇಯ ಸುಬ್ಬರಾವ್ ಚವಾಣ್ ಎಂಬಾತ ಮಾನಕ್ಕೆ ಭಂಗ ಬರುವಂತೆ ಅಸಭ್ಯವಾಗಿ ವರ್ತನೆ ಮಾಡಿದ್ದು ಯುವತಿ ಮಂಡಗಾವ್ ಗೆ ಹೋಗಿ ಮರಳಿ ಬಂದು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರೈಲ್ವೆ ಪೊಲೀಸರು ಮತ್ತು ಗೋವಾ ಪೊಲೀಸರ ಸಹಕಾರದಲ್ಲಿ ಆರೋಪಿಯನ್ನು ವಶಕ್ಕೆ ಪಡೆದ ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.