ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಫ್ರೀ ಮೂವ್‌ಮೆಂಟ್ ಗೆ ತಡೆ: ಬೇಲಿ ಹಾಕಲು ಮುಂದಾದ ಕೇಂದ್ರ ಸರಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ-ಮ್ಯಾನ್ಮಾರ್ ಗಡಿಯ (India-Myanmar border) ಎರಡೂ ಬದಿಯಲ್ಲಿ ಮುಕ್ತ ಓಡಾಟವನ್ನು ನಿರ್ಬಂಧಿಸಲು ಕೇಂದ್ರ ಸರಕಾರ ಮುಂದಾಗಿದ್ದು, ಎರಡೂ ಬದಿಯಲ್ಲಿ ವಾಸಿಸುವ ಜನರು ವೀಸಾ ಇಲ್ಲದೆ ಗಡಿದಾಟುವಂತಿಲ್ಲ ಎಂದು ಹೇಳಿದೆ.

ಈ ಹಿಂದೆ 16 ಕಿ.ಮೀನ ಒಳಗೆ ಫ್ರೀ ಮೂವ್‌ಮೆಂಟ್ ರಿಜಿಮ್ (ಎಫ್‌ಎಂಆರ್) ಮೂಲಕ ಹೋಗಬಹುದಿತ್ತು. ಆದರೆ ಇದೀಗ ಈ ಮೂವ್‌ಮೆಂಟ್​​ಗೆ ತಡೆ ನೀಡಲಾಗಿದೆ. ಕೇಂದ್ರ ಸರ್ಕಾರವು ಇಡೀ ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಸುಧಾರಿತ ಸ್ಮಾರ್ಟ್ ಫೆನ್ಸಿಂಗ್ ವ್ಯವಸ್ಥೆಗಾಗಿ ಟೆಂಡರ್ ಪ್ರಾರಂಭಿಸಲು ನಿರ್ಧರಿಸಿದೆ.

ನಾವು ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ FMR (Free Movement Regime)ನ್ನು ಕೊನೆಗೊಳಿಸಲಿದ್ದೇವೆ. ಸಂಪೂರ್ಣ ಗಡಿಯಲ್ಲಿ ಬೇಲಿ ಹಾಕಲಾಗುವುದು ಹಾಗೂ ಮುಂದಿನ ನಾಲ್ಕೂವರೆ ವರ್ಷಗಳಲ್ಲಿ ಬೇಲಿ ಹಾಕುವ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ಮೂಲಕ ಮೀಸಾ ಇಲ್ಲದೆ ದೇಶದ ಒಳಗೆ ಬರುವಂತಿಲ್ಲ ಎಂದು ಭಾರತ ಸರ್ಕಾರ ಹೇಳಿದೆ.

ಭಾರತದ ಮೇಲೆ ದಾಳಿ ಹಾಗೂ ಬಂಡಾಯ ಗುಂಪುಗಳು ಪಲಾಯನ ಮಾಡಲು ಈ ಗಡಿ ಭಾಗವನ್ನು ಬಳಸಲಾಗುತ್ತಿತ್ತು. ಇದನ್ನು ತಡೆಯಲು ಮಾತ್ರವಲ್ಲದೆ, ಅಕ್ರಮ ವಲಸಿಗರ ಒಳಹರಿವು, ಡ್ರಗ್ಸ್ ಮತ್ತು ಚಿನ್ನದ ಕಳ್ಳಸಾಗಣೆಗೆ ಕಡಿವಾಣ ಹಾಕಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

ರಾಜ್ಯವು ರಾಷ್ಟ್ರೀಯ ನಾಗರಿಕರ ನೋಂದಣಿ ಮತ್ತು ಮ್ಯಾನ್ಮಾರ್ ಗಡಿಯ ಬೇಲಿ ಹಾಕುವ ಬಗ್ಗೆ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಈಗಾಗಲೇ ಮಣಿಪುರವು ಮ್ಯಾನ್ಮಾರ್‌ನೊಂದಿಗೆ ಸುಮಾರು 390 ಕಿಮೀ ಸರಂಧ್ರ ಗಡಿಯನ್ನು ಹಂಚಿಕೊಂಡಿದೆ. ಅದರಲ್ಲಿ ಸುಮಾರು 10 ಕಿಮೀ ಮಾತ್ರ ಬೇಲಿಯಿಂದ ಸುತ್ತುವರಿದಿದೆ.

ಭಾರತ ಮತ್ತು ಮ್ಯಾನ್ಮಾರ್ ನಡುವಿನ ಗಡಿಯು ಮಿಜೋರಾಂ, ಮಣಿಪುರ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶಗಳ ನಾಲ್ಕು ರಾಜ್ಯಗಳಲ್ಲಿ 1,643 ಕಿ.ಮೀ. FMR ಎರಡು ದೇಶಗಳ ನಡುವಿನ ಪರಸ್ಪರ ಒಪ್ಪಿಗೆಯ ವ್ಯವಸ್ಥೆಯಾಗಿದ್ದು, ಗಡಿಯಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರು ವೀಸಾ ಇಲ್ಲದೆ ಇತರ ದೇಶದೊಳಗೆ 16 ಕಿ.ಮೀ ವರೆಗೆ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!