ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 260 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರೆ, ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾಗೆ 39 ವರ್ಷದ ವ್ಯಕ್ತಿ ಬಲಿಯಾಗಿದ್ದಾನೆ.
ಈ ಮೂಲಕ ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇಕಡಾ 3.46 ರಷ್ಷಿದ್ದು, 1,175 ಜನರಲ್ಲಿ ಸಕ್ರಿಯ ಕೇಸ್ಗಳಿವೆ. ಜೊತೆಗೆ ಇವತ್ತು 228 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಇಂದು 260 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರೆ, ಅದರಲ್ಲಿ ಬೆಂಗಳೂರಿನಲ್ಲಿಯೇ 134 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇನ್ನುಳಿದಂತೆ ಬಾಗಲಕೋಟೆ 4, ಬಳ್ಳಾರಿ 2, ಬೆಂಂಗಳೂರು ಗ್ರಾಮಾಂತರ 20, ಚಾಮರಾಜನಗರ 4, ಚಿಕ್ಕಬಳ್ಳಾಪುರ 4, ಚಿತ್ರದುರ್ಗ 2 ಕೇಸ್ ಗಳು ಬೆಳಕಿಗೆ ಬಂದಿದೆ.ದಕ್ಷಿಣ ಕನ್ನಡ 9, ದಾವಣಗೆರೆ 3, ಧಾರವಾಡ 9, ಗದಗ 1, ಹಾಸನ 2, ಕೋಲಾರ 1, ಕೊಪ್ಪಳ 1, ಮಂಡ್ಯ 8, ಮೈಸೂರು 24, ರಾಯಚೂರು 1, ರಾಮನಗರ 7, ಶಿವಮೊಗ್ಗ 11, ತುಮಕೂರು 6, ಉತ್ತರ ಕನ್ನಡ 4 ಹಾಗೂ ವಿಜಯನಗರ ಜಿಲ್ಲೆಯಲ್ಲಿ ಇಂದು 3 ಕೊವಿಡ್ ಕೇಸ್ ಪತ್ತೆಯಾಗಿದೆ. ಜೊತೆಗೆ ಇವರಿಗೆ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.