Thursday, February 29, 2024

11 ಎಸೆತದಲ್ಲಿ ನೋ ರನ್ 6 ವಿಕೆಟ್ ಪತನ: 153‌ ರನ್‌ಗೆ ಟೀಂ ಇಂಡಿಯಾ ಆಲೌಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೌತ್ ಆಫ್ರಿಕಾ ತಂಡವನ್ನು 55 ರನ್‌ಗೆ ಆಲೌಟ್ ಮಾಡಿದ ಟೀಂ ಇಂಡಿಯಾ 153‌ ರನ್‌ಗೆ ಆಲೌಟ್ ಆಗಿದೆ. ಒಂದೂ ರನ್ ಸಿಡಿಸಿದೇ ಭಾರತ 6 ವಿಕೆಟ್ ಕಳೆದುಕೊಂಡಿದ್ದು ಮಾತ್ರವಲ್ಲ, 6 ಮಂದಿ ಶೂನ್ಯಕ್ಕೆ ಔಟಾಗಿದ್ದಾರೆ.

ನಾಯಕ ರೋಹಿತ್ ಶರ್ಮಾ, ಶುಬಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ದಿಟ್ಟ ಹೋರಾಟ ನೀಡಿದ್ದಾರೆ. ಈ ಮೂಲಕ ಭಾರತ 4 ವಿಕೆಟ್ ಕಳೆದುಕೊಂಡು 153 ರನ್ ಸಿಡಿಸಿತು. ಆದರೆ ನಂತರದ 11 ಎಸೆತದಲ್ಲಿ ಭಾರತದ ಸಂಪೂರ್ಣ ಚಿತ್ರಣ ಬದಲಾಗಿದೆ. ಒಂದೇ ಒಂದು ರನ್ ಬಂದಿಲ್ಲ. ಆದರೆ 6 ವಿಕೆಟ್‌ಗಳು ಕಳೆದುಕೊಂಡಿತು. ಇದರ ಪರಿಣಾಮ 34.5 ಓವರ್‌ಗಳಲ್ಲಿ ಭಾರತ 153 ರನ್‌ಗೆ ಆಲೌಟ್ ಆಗಿದೆ.

ಕೆಎಲ್ ರಾಹುಲ್ 8 ರನ್ ಸಿಡಿಸಿದರೆ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಶೂನ್ಯಕ್ಕೆ ಔಟಾಗಿದ್ದಾರೆ. ಇನ್ನು ಆರಂಭಿಕ ಯಶಸ್ವಿ ಜೈಸ್ವಾಲ್ ಕೂಡ ಶೂನ್ಯಕ್ಕೆ ಔಟಾಗಿದ್ದಾರೆ. ಸೌತ್ ಆಫ್ರಿಕಾ ತಂಡವನ್ನು ಕೇವಲ 55 ರನ್‌ಗೆ ಆಲೌಟ್ ಮಾಡಿದ ಕಾರಣ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 98 ರನ್ ಮುನ್ನಡೆ ಪಡೆದುಕೊಂಡಿತು.

ಸೌತ್ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಸಿರಾಜ್ ದಾಳಿಗೆ ಆಘಾತ ಎದುರಿಸಿತ್ತು. ಸಿರಾಜ್ ಮಾರಕ ದಾಳಿಗೆ 6 ವಿಕಟ್ ಪತನಗೊಂಡಿತ್ತು. ಇನ್ನು ಇನ್ನು ಜಸ್ಪ್ರೀತ್ ಬುಮ್ರಾ ಹಾಗೂ ಮುಕೇಶ್ ಕುಮಾರ್ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!