ವಿವಾದಾತ್ಮಕ‌ ಹೇಳಿಕೆ: ಬಿ.ಕೆ. ಹರಿಪ್ರಸಾದ್ ಬಂಧನಕ್ಕೆ ಸುನೀಲ ಹೆಗಡೆ ಆಗ್ರಹ

ಹೊಸದಿಗಂತ, ಕಾರವಾರ :

ಅಯೋಧ್ಯದಲ್ಲಿನ ಶ್ರೀ ರಾಮಲಲಾ ಪ್ರಾಣ ಪ್ರತಿಷ್ಠಾಪನೆ ಸಂದರ್ಭ ಗೋದ್ರಾ ಮಾದರಿ ಹತ್ಯಾಕಾಂಡ ನಡೆಯಬಹುದು ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ವಿಧಾನ‌ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ ಅವರನ್ನು ಕೊಲೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ತಕ್ಷಣ ಬಂಧಿಸಬೇಕು ಎಂದು ಹಳಿಯಾಳ ಮಾಜಿ ಶಾಸಕ ಸುನೀಲ ಹೆಗಡೆ ಆಗ್ರಹಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಹರಿಪ್ರಸಾದ ತಮ್ಮ ಮಾತಿನಲ್ಲಿ ತಮಗೆ ನಿಖರ ಮಾಹಿತಿ ಇದೆ ಎಂದು ಹೇಳಿದ್ದಾರೆ. ಹೀಗಾಗಿ ಸರ್ಕಾರ ತಕ್ಷಣ ಅವರನ್ನು ಬಂಧಿಸಿ ಅವರಲ್ಲಿ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಇರುವ ಮಾಹಿತಿಯನ್ನು ಪಡೆಯಬೇಕು ಮತ್ತು ರಾಮಭಕ್ತರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹ ಮಾಡಿದ್ದಾರೆ.

ರಾಮಮಂದಿರ ಉದ್ಘಾಟನೆಯನ್ನು ಸಮಸ್ತ ದೇಶವೇ ಎದುರು ನೋಡುತ್ತಿರುವ ಸಂದರ್ಭದಲ್ಲಿ ಹರಿಪ್ರಸಾದ ಹಿಂದುಗಳಲ್ಲಿ ಭಯ ಬಿತ್ತುವ ಹುನ್ನಾರ ನಡೆಸಿದ್ದಾರೆ. ಆದರೆ ದೇಶ – ಧರ್ಮ ರಕ್ಷಣೆಗೆ ಪ್ರಾಣವನ್ನೂ ನೀಡಲು ಹಿಂಜರಿಯದ ಹಿಂದೂ ಕಾರ್ಯಕರ್ತರು ಇಂತಹ ಗೊಡ್ಡು ಬೆದರಿಕೆಗೆ ಅಂಜಲು ಅವರೇನೂ ಕಾಂಗ್ರೆಸ್ ಕಾರ್ಯಕರ್ತರಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!