ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಕೋವಿಡ್ ಹಾವಳಿ ಮತ್ತಷ್ಟು ಹೆಚ್ಚಳವಾಗಿದ್ದು, ಕೋವಿಡ್ ರೂಪಾಂತರಿ ತಳಿ ಜೆಎನ್.1ಗೆ ಇದುವರೆಗೆ 511 ತುತ್ತಾಗಿದ್ದಾರೆ ಎಂದು ಸರ್ಕಾರದ ಅಧಿಕೃತ ಮೂಲಗಳು ಮಾಹಿತಿ ಬಹಿರಂಗಗೊಳಿಸಿವೆ.
ಇನ್ನೊಂದು ಆಘಾತಕಾರಿ ಅಂಶ ಎಂದರೆ ಈ ಪೈಕಿ ಅತೀ ಹೆಚ್ಚು ಸೋಂಕಿತರು ಕರ್ನಾಟಕ ರಾಜ್ಯದಲ್ಲಿಯೇ ಇದ್ದಾರೆ.
ಅಂಕಿ ಅಂಶಗಳ ಪ್ರಕಾರ ಇದುವರೆಗೆ ಕರ್ನಾಟಕದಲ್ಲಿ 199 ಜನರಿಗೆ ಜೆಎನ್.1 ಸೋಂಕು ತಗುಲಿದೆ. ಉಳಿದಂತೆ ಕೇರಳದಲ್ಲಿ 148, ಗೋವಾದಲ್ಲಿ 47, ಗುಜರಾತ್‌ನಲ್ಲಿ 36, ಮಹಾರಾಷ್ಟ್ರದಲ್ಲಿ 32, ತಮಿಳುನಾಡಿನಲ್ಲಿ 26, ದೆಹಲಿಯಲ್ಲಿ 15, ರಾಜಸ್ಥಾನದಲ್ಲಿ 4, ತೆಲಂಗಾಣದಲ್ಲಿ ಇಬ್ಬರಿಗೆ ಹಾಗೂ ಒಡಿಶಾ ಮತ್ತು ಹರಿಯಾಣದಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.