ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಆದರೆ ರಿಲೀಸ್ ಆಗಿ ಕೆಲವೇ ದಿನಕ್ಕೆ ಎಲ್ಲ ಸಿನಿಮಾಗಳಂತೆ ಇದಕ್ಕೂ ಪೈರಸಿ ಕಾಟ ಶುರುವಾಗಿದೆ. ಟೆಲಿಗ್ರಾಂನಲ್ಲಿ ಸಿನಿಮಾ ಲಿಂಕ್ ಶೇರ್ ಮಾಡ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ದೇವದುರ್ಗದ ಗಂಗಾನಾಯಕ್ ತಾಂಡದ ಮೌನೇಶ್ ಎಂಬಾತ, 40ರೂಪಾಯಿ ಹಣ ಪಡೆದು ಕಾಟೇರ ಸಿನಿಮಾ ಲಿಂಕ್ ಶೇರ್ ಮಾಡ್ತಿದ್ದ. ಫೋನ್‌ಪೆಯಲ್ಲಿ 40 ರೂಪಾಯಿ ಬಂದ ನಂತರ ಸಿನಿಮಾ ಲಿಂಕ್ ಕಳಿಸಿಕೊಡುತ್ತಿದ್ದ ಎನ್ನಲಾಗಿದೆ. ಇನ್ನು ಐಡಿಯಾ ಹಾಕಿಕೊಟ್ಟ ಉಪೇಂದ್ರ ಎಂಬಾತ ತಲೆಮರೆಸಿಕೊಂಡಿದ್ದಾನೆ.