ಅಯೋಧ್ಯೆಗೆ ಟೈಟ್ ಸೆಕ್ಯುರಿಟಿ, 11 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇನ್ನೇನು ಕೆಲವೇ ದಿನಗಳಲ್ಲಿ ಸಹಸ್ರಾರು ರಾಮಭಕ್ತರ ಬಹುದಿನದ ಕನಸು ನನಸಾಗಲಿದೆ.

ಅಯೋಧ್ಯೆಯಲ್ಲಿ ರಾಮಮಂದಿರ ಶಂಕುಸ್ಥಾಪನೆ ಸಮಾರಂಭ ಜನವರಿ ೨೨ರಂದು ನಡೆಯಲಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗುತ್ತಿದೆ. ಉತ್ತರ ಪ್ರದೇಶ ನಗರದಲ್ಲಿ ಸಿಸಿಟಿವಿ ಅಳವಡಿಸಲಾಗುತ್ತಿದೆ.

ಹೆಚ್ಚಿನ ಭದ್ರತೆಗಾಗಿ ಅಯೋಧ್ಯೆಯ ಮುಖ್ಯದ್ವಾರಗಳಲ್ಲಿ ಸಿಸಿಟಿವಿ ಕಣ್ಗಾವಲು ಇರಲಿದೆ. ಒಟ್ಟಾರೆ ೧೧ ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ರಸ್ತೆಯಲ್ಲಿ ಸ್ಕ್ಯಾನರ್‌ಗಳನ್ನು ಅಳವಡಿಸಲಾಗಿರುತ್ತದೆ. ಯಾವುದೇ ವಾಹನ ರಸ್ತೆಯಲ್ಲಿ ಪಾಸ್ ಆದರೂ ತಕ್ಷಣವೇ ಅದನ್ನು ಸ್ಕ್ಯಾನ್ ಮಾಡಿ ಚೆಕ್ ಮಾಡಲಾಗುತ್ತದೆ. ರಸ್ತೆಯ ಎಡ ಹಾಗೂ ಬಲಬದಿಯಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ.

ಪ್ರಧಾನಿ ಮೋದಿ ಉದ್ಘಾಟನೆ ನೆರವೇರಿಸುವ ಕಾರಣದಿಂದ ಭದ್ರತೆ ಬಗ್ಗೆ ಹೆಚ್ಚೇ ನಿಗಾ ಇಡಲಾಗಿದೆ. ಭದ್ರತೆಗೆ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಕೃತಕ ಬುದ್ದಿಮತ್ತೆ ಕಣ್ಗಾವಲಿಗೆ ನಿಯೋಜನೆ ಮಾಡುವ ಸಾಧ್ಯತೆಯೂ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!