ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿಯಲ್ಲಿ ಅಪಘಾತಗಳ ಸರಣಿ ಮತ್ತೆ ಮುಂದುವರಿದಿದ್ದು, ಬಿಎಂಟಿಸಿ ಬಸ್‌ಗೆ ಮತ್ತೊಂದು ಬಲಿಯಾಗಿದೆ. ಮಾರತ್ತಹಳ್ಳಿಯ ವರ್ತೂರು ಮುಖ್ಯರಸ್ತೆಯಲ್ಲಿ ಬಸ್ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದೆ.
ಎಳಂಗೋವನ್ ಸೆಂಕತ್ತವಲ್ ಮೃತರು. ಬೆಳ್ಳಂದೂರಿಗೆ ಬೈಕ್ ಸವಾರ ತೆರಳುತ್ತಿದ್ದ ವೇಳೆ ಬಸ್‌ಗೆ ಡಿಕ್ಕಿಯಾಗಿದೆ. ತಲೆ ಹಾಗೂ ಮುಖಕ್ಕೆ ಗಾಯಗಳಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಎಚ್‌ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.