ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ ಶಹಜಹಾನ್ ಶೇಖ್ ವಿರುದ್ಧ ಇಡಿ ರೇಡ್ ನಡೆಸಲು ಹೋಗಿದ್ದವರ ಮೇಲೆ ಈ ದಾಳಿ ನಡೆದಿತ್ತು. ಆದರೆ, ಈ ದಾಳಿ ಬಳಿಕ ರೇಡ್‌ಗೊಳಗಾದ ಟಿಎಂಸಿ ನಾಯಕ ನಾಪತ್ತೆಯಾಗಿದ್ದಾರೆ .
ಈ ಹಿನ್ನೆಲೆ ಶಹಜಹಾನ್ ಶೇಖ್ ಕೇಂದ್ರೀಯ ತನಿಖಾ ಸಂಸ್ಥೆ ಟಿಎಂಸಿ ನಾಯಕ ಶೇಖ್‌ಗೆ ಲುಕ್‌ಔಟ್ ನೋಟಿಸ್ ಜಾರಿ ಮಾಡಿದೆ.
ರೇಡ್ ಸಮಯದಲ್ಲಿ ಶಹಜಹಾನ್ ಶೇಖ್ ಮನೆಯಲ್ಲಿದ್ದರು. ಆದರೆ, ತನಿಖಾ ಸಂಸ್ಥೆ ಅಧಿಕಾರಿಗಳ ಮೇಲೆ ದಾಳಿಯ ನಂತರ ಅವರು ತಮ್ಮ ಕುಟುಂಬದೊಂದಿಗೆ ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತೃಣಮೂಲ ಕಾಂಗ್ರೆಸ್ ನಾಯಕ ಬಾಂಗ್ಲಾದೇಶಕ್ಕೆ ಪಲಾಯನ ಮಾಡಲು ಪ್ರಯತ್ನಿಸಿದರು. ಆದರೆ ಗಡಿ ಭದ್ರತಾ ಪಡೆ ಮತ್ತು ಬಾಂಗ್ಲಾದೇಶ ರೈಫಲ್ಸ್‌ನಿಂದ ಗಡಿಯಲ್ಲಿ ಕಟ್ಟುನಿಟ್ಟಿನ ಕಾವಲು ಇದ್ದ ಕಾರಣ ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು. ಬಾಂಗ್ಲಾದೇಶದಲ್ಲಿ ಭಾನುವಾರ ಮತದಾನ ನಡೆಯಲಿದೆ. ಈ ಹಿನ್ನೆಲೆ ಶೇಖ್ ಮತ್ತು ಅವರ ಕುಟುಂಬದವರು ಪಶ್ಚಿಮ ಬಂಗಾಳದಲ್ಲೇ ಎಲ್ಲೋ ಅಡಗಿಕೊಂಡಿದ್ದಾರೆ ಎಂದು ಕೇಂದ್ರ ತನಿಖಾ ಸಂಸ್ಥೆ ಊಹಿಸಿದೆ.
ಪಡಿತರ ವಿತರಣೆ ಹಗರಣದ ತನಿಖೆಗೆ ಸಂಬಂಧಿಸಿದಂತೆ ಕೇಂದ್ರೀಯ ಸಂಸ್ಥೆಯ ತಂಡವು ತೃಣಮೂಲ ನಾಯಕನ ನಿವಾಸದ ಮೇಲೆ ರೇಡ್ ಮಾಡಿತ್ತು.