ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನು ವೈದ್ಯರ ಚೀಟಿ ಇಲ್ಲದೆ ಕೇರಳದ ಮೆಡಿಕಲ್‌ಗಳಲ್ಲಿ ಯಾವುದೇ ಔಷಧಿ ಸಿಗದು!
ಹೌದು, ಮೆಡಿಕಲ್ ಸ್ಟೋರ್‌ಗಳಿಗೆ ವೈದ್ಯರ ಚೀಟಿ ಇಲ್ಲದೆ ಔಷಧ ಮಾರಾಟ ಮಾಡದಂತೆ ರಾಜ್ಯ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಈ ನಿರ್ದೇಶನ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಇಲಾಖೆ ಎಚ್ಚರಿಕೆ ನೀಡಿದೆ.
ರಾಜ್ಯದಲ್ಲಿ ಆಂಟಿಬಯೋಟಿಕ್‌ಗಳ ಮಾರಾಟದ ದಾಖಲೆಗಳನ್ನು ಆಯಾ ಔಷಧಾಲಯಗಳು ಸರಿಯಾಗಿ ನಿರ್ವಹಿಸಬೇಕು. ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಆಂಟಿಬಯೋಟಿಕ್‌ಗಳನ್ನು ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದರೆ ಜನರು ಕೂಡ ದೂರು ದಾಖಲಿಸಬಹುದು. ಎಂದು ಇಲಾಖೆ ಹೇಳಿದೆ. ಇದೇ ವೇಳೆ ಪ್ರತಿಯೊಬ್ಬರೂ ತಮ್ಮ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡಬೇಕು. ಹಾಗಾಗಿ ಆಂಟಿಬಯೋಟಿಕ್ ಬಳಕೆಯಿಂದ ಆದಷ್ಟು ದೂರವಿರಬೇಕು ಎಂದೂ ಆರೋಗ್ಯ ಇಲಾಖೆ ನಾಗರಿಕರಿಗೆ ಕಿವಿಮಾತು ಹೇಳಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ