ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾನು ಪ್ರಯಾಣಿಸಬೇಕಿರುವ ವಿಮಾನ ಕೈ ಕೊಟ್ಟು ಮತ್ತೆ ತೀವ್ರ ಮುಜುಗರಕ್ಕೊಳಗಾಗಿದ್ದಾರೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ.
ಕೊನೆ ಘಳಿಗೆಯಲ್ಲಿ ವಿಮಾನ ಕೆಟ್ಟುನಿಲ್ಲವ ಇಂತಹಾ ಘಟನೆ ನಡೆಯುತ್ತಿರುವುದು ಕಳೆದ ನಾಲ್ಕು ತಿಂಗಳಲ್ಲಿ ಇದು ಎರಡನೇ ಬಾರಿಯಾಗಿದೆ. ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಆಗಮಿಸಿದ್ದ ಸಂದರ್ಭ ವಿಮಾನವು ಕೆಟ್ಟುನಿಂತು ಎರಡು ದಿನಗಳ ಕಾಲ ಭಾರತದಲ್ಲಿಯೇ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಬಾರಿ ಕುಟುಂಬ ವಿಹಾರಕ್ಕಾಗಿ ಜಮೈಕಾಗೆ ಹೋಗಿದ್ದ ಕೆನಡಾದ ಪ್ರಧಾನಿ, ತಮ್ಮ ಕುಟುಂಬದೊಂದಿಗೆ ಅಲ್ಲಿ ರೆಸಾರ್ಟ್‌ನಲ್ಲಿ ತಂಗಿದ್ದರು. ಮತ್ತೆ ಹಿಂದಿರುಗುವ ಸಂದರ್ಬ ವಿಮಾನವು ಕೆಟ್ಟನಿಂತಿದೆ. ಈ ಬಾರಿ ಒಂದು ದಿನ ಅವರು ಅಲ್ಲೇ ಉಳಿಯಬೇಕಾಗಿ ಬಂತು. ರಾಷ್ಟ್ರೀಯ ರಕ್ಷಣಾ ಇಲಾಖೆಯು ಜಮೈಕಾಕ್ಕೆ ಎರಡನೇ ವಿಮಾನವನ್ನು ಕಳುಹಿಸಿದೆ ಎಂದು ಕೆನಡಾದ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ