ಹೊಸದಿಗಂತ ಡಿಜಿಟಲ್ ಡೆಸ್ಕ್:
ಹರಿಯಾಣದ ಚೌಧರಿ ದೇವಿ ಲಾಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಂದ ಲೈಂಗಿಕ ಕಿರುಕುಳ ಅನುಭವಿಸುತ್ತಿದ್ದೇವೆ. ಪ್ರತಿ ಕ್ಲಾಸ್ನಲ್ಲಿಯೂ ಅಶ್ಲೀಲ ಪದಗಳನ್ನು ಬಳಸುತ್ತಾರೆ. ಸ್ನಾನದ ಗೃಹಕ್ಕೆ ಕರೆದುಕೊಂಡು ಹೋಗಿ ಖಾಸಗಿ ಅಂಗಗಳನ್ನು ಮುಟ್ಟುತ್ತಾರೆ. ಸೆಕ್ಸ್ ನಡೆಸಲು ಒತ್ತಾಯಿಸಿದ್ದಾರೆ. ಒಪ್ಪದಿದ್ದರೆ ಪರಿಣಾಮ ಸರಿಇರೋದಿಲ್ಲ ಎಂದು ಬೆದರಿಸಿದ್ದಾರೆ.
ಇದು 500 ವಿದ್ಯಾರ್ಥಿನಿಯರ ಭಾವನಾತ್ಮಕ ಪತ್ರ…
ಲೈಂಗಿಕ ಕಿರುಕುಳ ನೀಡುತ್ತಿರುವ ಪ್ರೊಫೆಸರ್ನನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ವಿದ್ಯಾರ್ಥಿನಿಯರು ಸಿಎಂ ಎಂ.ಎಲ್ ಖಟ್ಟರ್ ಹಾಗೂ ಪ್ರಧಾನಿ ಮೋದಿ ಕಚೇರಿಗೆ ಪತ್ರ ಬರೆದಿದ್ದಾರೆ.
ಯಾವುದೇ ಮೇಲಾಧಿಕಾರಿಗಳಿಗೆ ಒಂದು ಚೂರು ಸುಳಿವು ಬರದಂತೆ ಪ್ರೊಫೆಸರ್ ನಡೆದುಕೊಂಡಿದ್ದು, ಅವರೆದುರು ಸ್ಟೂಡೆಂಟ್ಸ್ಗೆ ನನ್ನ ಮೇಲೆ ದ್ವೇಷ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ನಂಬಿಸಿಬಿಟ್ಟಿದ್ದಾರೆ ದಯವಿಟ್ಟು ಇವರನ್ನು ಅಮಾನತುಮಾಡಿ ಎಂದು ವಿದ್ಯಾರ್ಥಿಗಳು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದೀಗ ಐಪಿಎಸ್ ಅಧಿಕಾರಿ ದೀಪ್ತಿ ಗಾರ್ಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚನೆಯಾಗಿದ್ದು, ವಿಚಾರಣೆ ಆರಂಭವಾಗಿದೆ. ಉಪಕುಲಪತಿಗಳಿಂದ ನಮಗೆ ಯಾವ ಸಹಾಯ ಬಂದಿಲ್ಲ, ನಮ್ಮನ್ನೇ ಕಾಲೇಜಿನಿಂದ ಡಿಸ್ಮಿಸ್ ಮಾಡುವುದಾಗಿ ಹೇಳಿದ್ದರು ಎಂದು ವಿದ್ಯಾರ್ಥಿನಿಯರು ಹೇಳಿಕೊಂಡಿದ್ದಾರೆ.