ನಟ ಯಶ್ ಗದಗ್ ಭೇಟಿ ವೇಳೆ ಬೆಂಗಾವಲು ವಾಹನ ಅಪಘಾತ: ಡಿಕ್ಕಿ ಹೊಡೆದಿದ್ದ ಅಭಿಮಾನಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯಶ್ ಬರ್ಥ್‌ಡೇಗೆ ಬ್ಯಾನರ್ ಕಟ್ಟುವ ವೇಳೆ ಮೂವರು ಅಭಿಮಾನಿಗಳು ಮೃತಪಟ್ಟಿದ್ದು, ಯಶ್ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

ಗದಗದಿಂದ ವಾಪಾಸಾಗುವ ವೇಳೆ ಪೊಲೀಸ್ ವಾಹನಕ್ಕೆ ಬೈಕ್ ಡಿಕ್ಕಿಯಾಗಿದ್ದು, ಅಭಿಮಾನಿಯೊಬ್ಬ ಮೃತಪಟ್ಟಿದ್ದಾನೆ. ವಾಹನಕ್ಕೆ ಸ್ಕೂಟಿ ಡಿಕ್ಕಿಯಾಗಿ ನಿಖಿಲ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದ. ಇಂದು ಚಿಕಿತ್ಸೆ ಫಲಕಾರಿಯಾಗದೇ ಆತನೂ ಮೃತಪಟ್ಟಿದ್ದಾನೆ.

ಯಶ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದರು. ಯಶ್ ಬಂದಿದ್ದಾರೆಂದು ತಿಳಿದ ನಿಖಿಲ್ ಅವರನ್ನು ಕಾಣಲು ವೇಗವಾಗಿ ಸ್ಕೂಟಿ ಓಡಿಸಿಕೊಂಡು ಬಂದು ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವವಾದ ನಿಖಿಲ್‌ರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಖಿಲ್ ಮೃತಪಟ್ಟಿದ್ದಾರೆ.

ಯಶ್ ಜನ್ಮದಿನದಂದು ಒಟ್ಟಾರೆ ನಾಲ್ವರು ಅಭಿಮಾನಿಗಳು ಮೃತಪಟ್ಟಿದ್ದು, ಯಶ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!