ವಿಭಿನ್ನ ರುಚಿಗೆ ಬೆಂಗಾಲಿ ಅಡುಗೆ ಶೈಲಿ ಅತ್ಯುತ್ತಮ ಉದಾಹರಣೆ. ಮಸಾಲೆ ಜಾಸ್ತಿ ಇಲ್ಲದಿದ್ದರೂ, ಸಾಸಿವೆ ಎಣ್ಣೆಯ ಘಮ, ಸ್ವಲ್ಪ ಸಿಹಿತನ ಮತ್ತು ಮೃದುವಾದ ಸುವಾಸನೆ ಈ ಬೆಂಗಾಲಿ ಸ್ಟೈಲ್ ಎಗ್ ಕರಿಯನ್ನು ವಿಶೇಷವಾಗಿಸುತ್ತದೆ. ದಿನನಿತ್ಯದ ಊಟಕ್ಕೂ, ವಿಶೇಷ ಸಂದರ್ಭಕ್ಕೂ ಚೆನ್ನಾಗಿ ಹೊಂದಿಕೊಳ್ಳುವ ಈ ಎಗ್ ಕರಿ, ಮನೆಯಲ್ಲೇ ರೆಸ್ಟೋರೆಂಟ್ ರುಚಿಯನ್ನು ನೀಡುತ್ತದೆ.
ಬೇಕಾಗುವ ಪದಾರ್ಥಗಳು:
ಮೊಟ್ಟೆ – 6
ಸಾಸಿವೆ ಎಣ್ಣೆ – 2 ಟೇಬಲ್ ಸ್ಪೂನ್
ಈರುಳ್ಳಿ – 2
ಟೊಮೇಟೊ – 2
ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಟೇಬಲ್ ಸ್ಪೂನ್
ಹಸಿಮೆಣಸು – 2
ಅರಿಶಿನ ಪುಡಿ – ½ ಟೀ ಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀ ಸ್ಪೂನ್
ಧನಿಯಾ ಪುಡಿ – 1 ಟೀ ಸ್ಪೂನ್
ಜೀರಿಗೆ ಪುಡಿ – ½ ಟೀ ಸ್ಪೂನ್
ಗರಂ ಮಸಾಲಾ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಸಕ್ಕರೆ – ಒಂದು ಚಿಟಿಕೆ
ನೀರು – ಅಗತ್ಯಕ್ಕೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ಮಾಡುವ ವಿಧಾನ:
ಮೊದಲು ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿ, ಸಿಪ್ಪೆ ತೆಗೆದು. ಮೊಟ್ಟೆ ಮೇಲೆ ಸ್ವಲ್ಪ ಚಾಕುವಿನಿಂದ ಚಿರಿದುಕೊಳ್ಳಿ.
ಒಂದು ಪಾತ್ರೆಯಲ್ಲಿ ಸಾಸಿವೆ ಎಣ್ಣೆಯನ್ನು ಚೆನ್ನಾಗಿ ಬಿಸಿಮಾಡಿ. ಮೊಟ್ಟೆಗಳನ್ನು ಸ್ವಲ್ಪ ಗೋಲ್ಡನ್ ಆಗುವವರೆಗೆ ಹುರಿದು ಹೊರತೆಗೆದು ಇಡಿ.
ಅದೇ ಎಣ್ಣೆಯಲ್ಲಿ ಈರುಳ್ಳಿ ಹಾಕಿ ಬ್ರೌನ್ ಆಗುವವರೆಗೆ ಹುರಿಯಿರಿ. ನಂತರ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿಮೆಣಸು ಸೇರಿಸಿ ಹುರಿಯಿರಿ.ಈಗ ಟೊಮೇಟೊ ಪೇಸ್ಟ್ ಸೇರಿಸಿ ಎಣ್ಣೆ ಬಿಡುವವರೆಗೆ ಬೇಯಿಸಿ.
ಈಗ ಅರಿಶಿನ, ಮೆಣಸಿನ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಉಪ್ಪು ಹಾಗೂ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬೇಕಾದಷ್ಟು ನೀರು ಸೇರಿಸಿ ಕುದಿಯಲು ಬಿಡಿ. ಗ್ರೇವಿ ಸ್ವಲ್ಪ ಗಟ್ಟಿಯಾಗಿದ ಮೇಲೆ ಹುರಿದ ಮೊಟ್ಟೆಗಳನ್ನು ಸೇರಿಸಿ 5–7 ನಿಮಿಷ ಕುದಿಸಿ.
ಕೊನೆಯಲ್ಲಿ ಗರಂ ಮಸಾಲಾ ಸೇರಿಸಿ ಒಂದು ಮಿನಿಟ್ ಕುದಿಸಿ ಗ್ಯಾಸ್ ಆಫ್ ಮಾಡಿ. ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ.

