ಪ್ರತಿಬಾರಿ ಮುಖ ತೊಳೆದ ನಂತರ ಕಡ್ಡಾಯವಾಗಿ ಮಾಯಿಶ್ಚರೈಸರ್ ಬಳಕೆ ಮಾಡಬೇಕು, ನಾವು ಕೆಮಿಕಲ್ ಇಷ್ಟಪಡೋದಿಲ್ಲ ಎಂದಾದರೆ ಹಾಲಿನ ಕೆನೆ, ಅಲೋವೆರಾ, ಜೇನುತುಪ್ಪವನ್ನಾದ್ರೂ ಹಚ್ಚಲೇಬೇಕು.
ಮುಖವನ್ನು ಕೋಮಲವಾಗಿ ಇಡೋದಷ್ಟೇ ಅಲ್ಲದೇ ಸಾಕಷ್ಟು ಕೆಲಸಗಳನ್ನು ಮಾಯಿಶ್ಚರೈಸರ್ ಮಾಡುತ್ತದೆ. ಏನೆಲ್ಲಾ ಲಾಭಗಳಿವೆ ನೋಡಿ..
- ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಮುಂದೆಯೂ ಬಾರದಂತೆ ತಡೆಗಟ್ಟುತ್ತದೆ.
- ಈಗಾಗಲೇ ಇರುವ ಕಲೆಗಳನ್ನು ಕಡಿಮೆ ಮಾಡೋದಕ್ಕೆ ಮಾಯಿಶ್ಚರೈಸ್ ಸಹಾಯ ಮಾಡುತ್ತದೆ. ಸ್ಕಿನ್ ಟೈಪ್ ಯಾವುದೇ ಇರಲಿ, ಮಾಯಿಶ್ಚರೈಸರ್ ಹಚ್ಚಲೇಬೇಕಿದೆ.
- ನನಗೆ ಬರೀ 30 ವರ್ಷ ಆದರೆ ನೋಡೋದಕ್ಕೆ ಐದು ವರ್ಷ ದೊಡ್ಡವಳಂತೆ ಕಾಣ್ತೀನಿ ಎಂದು ನೀವು ಅಂದುಕೊಳ್ತಿದ್ದೀರಾ? ಈ ಸಮಸ್ಯೆ ಬಾರದಂತೆ ತಡೆಯೋಕೆ ಮಾಯಿಶ್ಚರೈಸ್ ಮಾಡಿ, ಚರ್ಮ ಯಂಗ್ ಆಗಿ ಕಾಣುತ್ತದೆ.
- ವಯಸ್ಸಾದ ನಂತರ ರಿಂಕಲ್ಸ್ ಕಡಿಮೆ ಇರಬೇಕಾ? ಹಾಗಿದ್ರೆ ಇಂದಿನಿಂದಲೇ ನಿಮ್ಮ ಸ್ಕಿನ್ ಟೈಪ್ಗೆ ಸೂಕ್ತವಾಗುವ ಮಾಯಿಶ್ಚರೈಸರ್ ಹಚ್ಚಿ.
- ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಿದ ನಂತರ ಮಾಯಿಶ್ಚರೈಸರ್ ಹಚ್ಚಿದ್ರೆ ಸ್ಕಿನ್ ಕೂಡ ಖುಷಿಯಾಗಿರುತ್ತದೆ. ಹಾಗೇ ನಿಮಗೂ ಹೊಸ ಎನರ್ಜಿ ಬಂದಂತೆ ಆಗುತ್ತದೆ.