ಅಜ್ಮೇರ್‌ ತಲುಪಿತು ಪ್ರಧಾನಿ ಮೋದಿ ಅರ್ಪಿಸಿದ ಪವಿತ್ರ ಚಾದರ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೂಫಿ ಸಂತ ಖ್ವಾಜಾ ಮುಯಿನುದ್ದೀನ್ ಚಿಶ್ತಿ ಅವರ ಉರುಸ್ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅರ್ಪಿಸಿದ ಪವಿತ್ರ ಚಾದರ್‌, ಶನಿವಾರ ಅಜ್ಮೇರ್‌ ತಲುಪಿತು.

ಸಂಭ್ರಮದಿಂದ ಚಾದರ್‌ಗೆ ಭವ್ಯ ಸ್ವಾಗತ ನೀಡಿದ ಅನುಯಾಯಿಗಳು, ದರ್ಗಾಕ್ಕೆ ಕರೆತಂದರು. ಚಾದರ್ ಅನ್ನು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಜಮಾಲ್ ಸಿದ್ಧಿಕಿ ಅವರು ನರೇಂದ್ರ ಮೋದಿ ಪರವಾಗಿ ಸಮರ್ಪಿಸಿದರು.

ಚಿಶ್ತಿ ಅವರ 811ನೇ ಉರುಸ್ ಅಂಗವಾಗಿ ಪ್ರಪಂಚದಾದ್ಯಂತ ಇರುವ ಅವರ ಅನುಯಾಯಿಗಳಿಗೆ ಶುಭಕೋರಿದ್ದ ಪ್ರಧಾನಿ ಮೋದಿ, ದೇಶದ ಸಾಮರಸ್ಯ ಪರಂಪರೆಯ ಬಗ್ಗೆ ಉಲ್ಲೇಖ ಮಾಡಿದ್ದರು. ‌ಜ. 11ರಂದು ತಮ್ಮನ್ನು ಭೇಟಿ ಮಾಡಲು ಬಂದಿದ್ದ ದರ್ಗಾದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಪ್ರಧಾನಿ, ಚಾದರ್ ಅರ್ಪಿಸಿದ್ದರು

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!