ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ: ಗೋವುಗಳ ಜೊತೆ ಅಮೂಲ್ಯ ಕ್ಷಣ ಕಳೆದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ದೇಶಾದ್ಯಂತ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ. ಈ ಪವಿತ್ರ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ತಮ್ಮ ನಿವಾಸದಲ್ಲಿ ಕೆಲ ಹೊತ್ತು ಗೋವುಗಳ ಜೊತೆ ಕಳೆದಿದ್ದಾರೆ.

ಈ ಪವಿತ್ರ ಹಬ್ಬದ ಪ್ರಯುಕ್ತ ಪ್ರಧಾನಿ ಮೋದಿ ಗೋವುಗಳಿಗೆ ಮೇವು ತಿನ್ನಿಸಿದ್ದಾರೆ.ಪ್ರಧಾನಿ ಮೋದಿ ತಮ್ಮ ನಿವಾಸದಲ್ಲಿ 6ಕ್ಕೂ ಹೆಚ್ಚು ಗೋವುಗಳಿಗೆ ಮೇವು ತಿನ್ನಿಸಿದ್ದಾರೆ. ಗೋವುಗಳ ಜೊತೆ ಕಾಲ ಕಳೆದ ಮೋದಿ, ಮೇವಿನ ಜೊತೆಗೆ ಸಂಕ್ರಾಂತಿ ಹಬ್ಬದ ಸಿಹಿ ತಿನ್ನಿಸಿದ್ದಾರೆ.


ಸಂಕ್ರಾಂತಿ ಹಬ್ಬದ ದಿನ ಗೋವುಗಳನ್ನು ಶೃಂಗರಿಸಿ ಪೂಜೆ, ಅವುಗಳಿಗೆ ಮೇವು, ಸಿಹಿ ತಿನ್ನಿಸುವುದು ಸಂಪ್ರದಾಯ. ಹೀಗೆ ಪ್ರಧಾನಿ ಮೋದಿ ಗೋವುಗಳಿಗೆ ಮೇವು ತಿನ್ನಿಸಿದ್ದಾರೆ.

ಸೂರ್ಯನು ಮಕರ ರಾಶಿಯತ್ತ ಚಲನೆಯನ್ನುಆಧರಿಸಿ ಈ ಪವಿತ್ರ ದಿನವನ್ನು ಮಕರ ಸಂಕ್ರಾಂತಿಯಾಗಿ ಆಚರಿಸಲಾಗುತ್ತದೆ. ರೈತ ಮಕರ ಸಂಕ್ರಾಂತಿ ಹಬ್ಬವನ್ನು ಅತ್ಯಂತ ವಿಶೇಷವಾಗಿ ಆಚರಿಸುತ್ತಾರೆ . ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ ಅನ್ನೋದು ಕನ್ನಡದಲ್ಲಿ ಪ್ರಚಲಿತದಲ್ಲಿರುವ ಮಾತು.

ಕಬ್ಬು, ಎಳ್ಳು ಬೆಲ್ಲ ಮಿಶ್ರಣದ ಪ್ರಸಾದ ಮಕರ ಸಂಕ್ರಾಂತಿಯ ವಿಶೇಷ. ಈ ಹಬ್ಬ ಸಾಮರಸ್ಯ, ಕೃತಜ್ಞತೆ, ಪ್ರೀತಿ ಉದಾರತೆಯ ಸಂಕೇತವಾಗಿದೆ. ಇದೀಗ ಮೋದಿ ಸಂಕ್ರಾಂತಿ ಪ್ರಯುಕ್ತ ಗೋವುಗಳಿಗೆ ಮೇವು ತಿನ್ನಿಸುವ ಮೂಲಕ ಹಬ್ಬದ ವಿಶೇಷತೆ ಸಾರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!