ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆ: 55 ರಾಷ್ಟ್ರಗಳ 100ಕ್ಕೂ ಹೆಚ್ಚು ಗಣ್ಯರಿಗೆ ಆಹ್ವಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆ ರಾಮನ ಪ್ರಾಣಪ್ರತಿಷ್ಠಾಪನೆಗೆ ಕೇವಲ 8 ದಿನಗಳು ಬಾಕಿ ಉಳಿದಿದ್ದು, ಈ ಐತಿಹಾಸಿಕ ಕ್ಷಣಕ್ಕಾಗಿ ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ.

ಕಾರ್ಯಕ್ರಮಕ್ಕೆ ಪ್ರಮುಖ ನಾಯಕರು, ಸ್ಟಾರ್ ನಟರು, ಕ್ರಿಕೆಟಿಗರು ಸೇರಿದಂತೆ ಗಣ್ಯಾತಿಗಣ್ಯರನ್ನು ಆಹ್ವಾನಿಸಲಾಗಿದೆ. ಅದೇ ರೀತಿ ರಾಮಮಂದಿರ ಪ್ರಾಣಪ್ರತಿಷ್ಠೆ ಸಮಾರಂಭಕ್ಕೆ ರಾಯಭಾರಿಗಳು, ಸಂಸದರು ಸೇರಿದಂತೆ 55 ರಾಷ್ಟ್ರಗಳ 100ಕ್ಕೂ ಹೆಚ್ಚು ಗಣ್ಯರನ್ನು ಆಹ್ವಾನಿಸಲಾಗಿದೆ ಎಂದು ವಿಶ್ವ ಹಿಂದೂ ಫೌಂಡೇಶನ್ ಸಂಸ್ಥಾಪಕ ಹಾಗೂ ಜಾಗತಿಕ ಮುಖ್ಯಸ್ಥ ಸ್ವಾಮಿ ವಿಜ್ಞಾನಾನಂದ (Swami Vigyananand) ತಿಳಿಸಿದ್ದಾರೆ.

ಅರ್ಜೆಂಟೀನಾ, ಆಸ್ಟ್ರೇಲಿಯಾ, ಬೆಲಾರಸ್, ಬೋಟ್ಸ್ವಾನಾ, ಕೆನಡಾ, ಕೊಲಂಬಿಯಾ, ಡೆನ್ಮಾರ್ಕ್, ಡೊಮಿನಿಕಾ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಈಜಿಪ್ಟ್, ಇಥಿಯೋಪಿಯಾ, ಫಿಜಿ, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಘಾನಾ, ಗಯಾನಾ, ಹಾಂಗ್‌ಕಾಂಗ್, ಹಂಗೇರಿ, ಇಂಡೋನೇಷ್ಯಾ, ಐರ್ಲೆಂಡ್, ಇಟಲಿ, ಜಮೈಕಾ, ಜಪಾನ್, ಕೀನ್ಯಾ, ಕೊರಿಯಾ, ಮಲೇಷ್ಯಾ, ಮಲಾವಿ, ಮಾರಿಷಸ್, ಮೆಕ್ಸಿಕೋ, ಮ್ಯಾನ್ಮಾರ್, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ನೈಜೀರಿಯಾ, ನಾರ್ವೆ, ಸಿಯೆರಾ ಲಿಯೋನ್, ಸಿಂಗಾಪುರ್, ದಕ್ಷಿಣ ಆಫ್ರಿಕಾ, ಸ್ಪೇನ್, ಶ್ರೀಲಂಕಾ, ಸುರಿನಾಮ್, ಸ್ವೀಡನ್, ತೈವಾನ್, ತಾಂಜಾನಿಯಾ, ಥೈಲ್ಯಾಂಡ್, ಟ್ರಿನಿಡಾಡ್ ಮತ್ತು ಟೊಬಾಗೊ, ವೆಸ್ಟ್ ಇಂಡೀಸ್, ಉಗಾಂಡಾ, ಯುಕೆ, ಯುಎಸ್‌ಎ, ವಿಯೆಟ್ನಾಂ ಮತ್ತು ಜಾಂಬಿಯಾ ರಾಷ್ಟ್ರಗಳಿಗೆ ಅಯೋಧ್ಯಾ ರಾಮಮಂದಿರ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಲಾಗಿದೆ.

ಎಲ್ಲಾ ಅಂತಾರಾಷ್ಟ್ರೀಯ ವಿವಿಐಪಿ ಪ್ರತಿನಿಧಿಗಳು ಜನವರಿ 20 ರಂದು ಲಕ್ನೋಗೆ ಬಂದಿಳಿದು ಜನವರಿ 21 ರಂದು ಸಂಜೆಯ ಹೊತ್ತಿಗೆ ಅಯೋಧ್ಯೆಗೆ (Ayodhya) ಹೋಗುತ್ತಾರೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!