ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯ ಸಂಬಂಧವಾಗಿ ರಾಜಕೀಯ ಚರ್ಚೆಗಳಿಗೆ ಕಾರಣವಾಗಿದೆ. ಹಾಗೂ ಆನ್‌ಲೈನ್ ವಂಚಕರು, ಸೈಬರ್ ಅಪರಾಧಿಗಳು ರಾಮಮಂದಿರ ಉದ್ಘಾಟನೆಯ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದಾರೆ.
ರಾಮಮಂದಿರ ಉದ್ಘಾಟನೆಗೆ ನಿಮ್ಮನ್ನು ಆಹ್ವಾನಿಸಲಾಗಿದೆ ಎಂದು ವಾಟ್ಸ್‌ಆ್ಯಪ್‌ಗೆ ಮೆಸೇಜ್ ಕಳುಹಿಸಲಾಗಿದೆ. ಅವರು ಕಳುಹಿಸಿದ ಎಪಿಕೆ ಫೈಲ್‌ನ್ನು ಮೊಬೈಲ್‌ಗೆ ಡೌನ್‌ಲೋಡ್ ಮಾಡಿದರೆ ಮೊಬೈಲ್ ಹ್ಯಾಕ್ ಆಗುವ ಸಾಧ್ಯತೆ ಇದೆ. ಆದ್ದರಿಂದ, ಜನರು ವಾಟ್ಸ್‌ಆ್ಯಪ್ ಮೆಸೇಜ್ ಕುರಿತು ಜಾಗ್ರತೆಯಿಂದ ಇರಬೇಕಾಗಿದೆ.
ರಾಮಮಂದಿರ ಉದ್ಘಾಟನೆಯ ನಕಲಿ ಆಮಂತ್ರಣ ಪತ್ರಿಕೆ, ಇದು ಕೇವಲ ಎಪಿಕೆ ಫೈಲ್‌ನ್ನು ಹೊಂದಿರುತ್ತದೆ. ಅವರು ಕಳುಹಿಸಿದ ಲಿಂಕ್‌ಗೆ ಕ್ಲಿಕ್ ಮಾಡಿದರೆ ಮೊಬೈಲ್‌ಗೆ ಮಾಲ್‌ವೇರ್ ಅಟ್ಯಾಕ್ ಆಗುತ್ತದೆ. ಆಗ ಹ್ಯಾಕರ್‌ಗಳು ಸುಲಭವಾಗಿ ಮೊಬೈಲ್‌ಗೆ ಹ್ಯಾಕ್ ಮಾಡಬಹುದಾಗಿದೆ.
ಈ ಕಾರಣದಿಂದ, ಸ್ಮಾರ್ಟ್‌ಫೋನ್ ಬಳಕೆದಾರರು ಹಣವನ್ನು ಕಳೆದುಕೊಳ್ಳುವ, ವೈಯಕ್ತಿಕ ಮಾಹಿತಿಗಳು ಹ್ಯಾಕರ್‌ಗಳ ಪಾಲಾಗುವ ಸಂಭವ ಇದೆ. ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಕಲಿ ಆಮಂತ್ರಣ ಪತ್ರಿಕೆಗಳನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸುವ ಬಗ್ಗೆ ದೂರುಗಳು ಕೇಳಿಬಂದಿವೆ.