Tuesday, February 27, 2024

CINEMA | ‘ವರಾಹಚಕ್ರಂ’ ಚಿತ್ರದ ಮೂಲಕ ಗಾಯಕಿಯಾದ ನಟಿ ಪ್ರೇಮಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗೌರಿಪುತ್ರ ಖ್ಯಾತಿಯ ಮಂಜು ಮಸ್ಕಲ್ ಅವರ ನಿರ್ದೇಶನದಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಅವ್ಯವಸ್ಥಿತ ಪದ್ದತಿಗಳು, ಸಂಸ್ಕ್ರತಿಯ ಕಗ್ಗೊಲೆ, ದೌರ್ಜನ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಕಥಾಹಂದರ ಒಳಗೊಂಡ ಚಿತ್ರದಲ್ಲಿ ಹಿರಿಯನಟಿ ಪ್ರೇಮಾ ಅವರು ಮನ್ವಂತರಿ ಮೂವಿ ಮೇಕರ್ಸ್ ಅಡಿಯಲ್ಲಿ ಸ್ನೇಹಿತರೊಂದಿಗೆ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಲಾವಣ್ಯ ಗ್ರೂಪ್, ನಾಗಭೂಷಣ್ ಎಂ.ರಾವ್, ಮಂಜುನಾಥ್ ಸಿಗೌಡ್ರು, ಕೆ.ಎಸ್.ಜೈ ಸುರೇಶ್ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ವಿಶೇಷವಾಗಿ ನಾಯಕಿ ಪ್ರೇಮಾ ಅವರು ಈ ಚಿತ್ರದಲ್ಲಿ ದೇಶಭಕ್ತಿ ಗೀತೆಯೊಂದನ್ನು ಹಾಡಿದ್ದಾರೆ. ಈ ಹಾಡಿನ ಬಿಡುಗಡೆ ಕಾರ್ಯಕ್ರಮ ಜನವರಿ 26ರ ಗಣರಾಜ್ಯೋತ್ಸವದಂದು ನಡೆಯಲಿದೆ.

ಶೂಟಿಂಗ್ ಟೈಮ್ ನಲ್ಲಿ ಪ್ರೇಮ ಅವರು ಹಾಡುತ್ತಿರುವಾಗ ಅದನ್ನು ಕೇಳಿದ ನಿರ್ದೇಶಕರು ಅವರಿಗೆ ಈ ಹಾಡನ್ನು ಹಾಡಿ ಎಂದು ಕೇಳಿದಾಗ ಅವರೂ ಒಪ್ಪಿದ್ದಾರೆ. ನಾಯಕಿ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸಿದ್ದರಿಂದ ಪ್ರೇಮ ಅವರಿಗೆ ತುಂಬಾ ಅನುಭವಿಯಾದ ಗಾಯಕಿಯಂತೆ ಹಾಡಿದ್ದು ವಿಶೇಷವಾಗಿತ್ತು. ಅರ್ಜುನ್ ದೇವ ಚಿತ್ರದ ನಾಯಕನಾಗಿ ನಟಿಸಿದ್ದು, ರಾಣಾ, ಇಮ್ರಾನ್ ಷರೀಫ್, ಆರ್ಯನ್, ಪ್ರತೀಕ್ ಗೌಡ ಉಳಿದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!