April 18, 2026
Saturday, April 18, 2026
spot_img

VIRAL| ಇದು ಹಾವೋ, ಮೆಟ್ರೋನೋ ಒಂದೂ ಗೊತ್ತಾಗ್ತಿಲ್ವಲ್ಲ ಗುರೂ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಿರುತೆರೆ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ಅವರ ಜನಪ್ರಿಯ ಹಾರರ್ ಸರಣಿ ‘ನಾಗಿನ್-7’ ಈಗ ವಿಭಿನ್ನ ಪ್ರಚಾರದ ಮೂಲಕ ಭಾರಿ ಸದ್ದು ಮಾಡುತ್ತಿದೆ. ಇದು ಈಗಾಗಲೇ ಆರು ಸೀಸನ್‌ಗಳ ಮೂಲಕ ವೀಕ್ಷಕರನ್ನು ಸೆಳೆದಿದ್ದು ವ್ಯಾಪಕ ಅಭಿಮಾನಿ ಬಳಗವನ್ನು ಹೊಂದಿದೆ.

ಸದ್ಯ ಸೀಸನ್ 7ಕ್ಕೆ ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಇದಕ್ಕಾಗಿ ಪ್ರಚಾರ ಆರಂಭವಾಗಿದ್ದು, ಮುಂಬೈ ಮೆಟ್ರೋ ಲೈನ್ 1 ಅನ್ನು ವಿಶೇಷ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗಿದೆ. ಸದ್ಯ ಈ ಹೊಸ ಅನಿಮೇಟೆಡ್ ಲುಕ್ ನೋಡಿ ಪ್ರಯಾಣಿಕರು ಆಘಾತ ಒಳಗಾಗಿದ್ದಾರೆ. ಈ ವಿಡಿಯೊ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮುಂಬೈ ಮೆಟ್ರೋ ರೈಲನ್ನು ಸಂಪೂರ್ಣವಾಗಿ ‘ನಾಗಿನ್’ ದೃಶ್ಯದ ಅನಿಮೇಟೆಡ್ ಮೂಲಕ ಕ್ರಿಯೇಟ್ ಮಾಡಲಾಗಿದ್ದು ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವೈರಲ್ ವಿಡಿಯೊದಲ್ಲಿ ಮುಂಬೈ ಮೆಟ್ರೋ ‌ ‘ನಾಗಿನ್ 7’ ನ ಜಾಹೀರಾತಾಗಿ ರೂಪಾಂತರಗೊಂಡಿದ್ದು, ರೈಲಿನ ಹೊರಭಾಗಕ್ಕೆ ಹಾವಿನ ಚರ್ಮದಂತಹ ವಿನ್ಯಾಸ ಮತ್ತು ‘ನಾಗಿನ್ 7’ ಬಣ್ಣ ಬಣ್ಣದ ಗ್ರಾಫಿಕ್ಸ್ ಹಚ್ಚಲಾಗಿದೆ. ಹಳಿಗಳ ಮೇಲೆ ರೈಲು ಹೋಗುತ್ತಿದ್ದಂತೆ ಅದು ಬೃಹತ್ ಹಾವು ಹರಿದಾಡುತ್ತಿರುವಂತೆ ಭಾಸವಾಗುತ್ತಿದ್ದು, ಇದನ್ನು ಕಂಡ ಪ್ರಯಾಣಿಕರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !