October 12, 2026
Monday, October 12, 2026
spot_img

ರಾಜಧಾನಿಯಲ್ಲಿ ಫುಲ್ ಕೂಲ್ ಕೂಲ್: ವರುಣನ ಆರ್ಭಟಕ್ಕೆ ದೆಹಲಿ-ಎನ್‌ಸಿಆರ್‌ನಲ್ಲಿ ಕುಸಿದ ತಾಪಮಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನೈಋತ್ಯ ಉತ್ತರ ಪ್ರದೇಶ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಭಾನುವಾರ ಭಾರೀ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ದೆಹಲಿ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಮುಂಬರುವ ದಿನಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.

ತಾಪಮಾನ ಕುಸಿತ


ಮಳೆಯ ಕಾರಣದಿಂದಾಗಿ ದೆಹಲಿಯ ಸಫ್ದರ್‌ಜಂಗ್‌ನಲ್ಲಿ ಗರಿಷ್ಠ ತಾಪಮಾನ 27.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ 6.5 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗಿದೆ. ಇನ್ನು ಕನಿಷ್ಠ ತಾಪಮಾನ 24.6 ಡಿಗ್ರಿ ಸೆಲ್ಸಿಯಸ್ ಇತ್ತು. ಕಳೆದ 24 ಗಂಟೆಗಳಲ್ಲಿ 30.0 ಮಿಮೀ ಮಳೆ ದಾಖಲಾಗಿದ್ದು, ವಾತಾವರಣದಲ್ಲಿ ಆರ್ದ್ರತೆ ಶೇಕಡಾ 98 ರಷ್ಟಿತ್ತು. ಮಳೆಯಿಂದಾಗಿ ಹವಾಮಾನ ತಂಪಾಗಿದ್ದು, ಇಂಡಿಯಾ ಗೇಟ್ ಸುತ್ತಮುತ್ತ ಜನರು ಜಾಗಿಂಗ್ ಮಾಡುತ್ತಾ, ಮಕ್ಕಳು ಮಳೆಯಲ್ಲಿ ಆಟವಾಡುತ್ತಾ ವೀಕೆಂಡ್ ಎಂಜಾಯ್ ಮಾಡಿದರು.

ರಸ್ತೆಗಳು ಜಲಾವೃತ, ಟ್ರಾಫಿಕ್ ಜಾಮ್

ಮಳೆಯು ವಾತಾವರಣವನ್ನು ತಂಪಾಗಿಸಿದೆಯಾದರೂ, ದೆಹಲಿ ಹಾಗೂ ಗುರುಗ್ರಾಮದ ಪ್ರಮುಖ ರಸ್ತೆಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತು ಜಲಾವೃತಗೊಂಡಿದೆ.ಗೀತಾ ಕಾಲೋನಿ, ಅಕ್ಬರ್ ರೋಡ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು.

ಅಧಿಕಾರಿಗಳಿಗೆ ಸಿಎಂ ರೇಖಾ ಗುಪ್ತಾ ಖಡಕ್ ಸೂಚನೆ

ದೆಹಲಿಯಲ್ಲಿ ಸತತ ಮಳೆಯಿಂದಾಗಿ ಉಂಟಾಗಿರುವ ಜಲಾವೃತ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಶನಿವಾರ ಸದ್ಭಾವನಾ ಪಾರ್ಕ್ ಮತ್ತು ಸುತ್ತಮುತ್ತಲಿನ ರಸ್ತೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನ್-ಗ್ರೌಂಡ್ ಸಿಬ್ಬಂದಿ ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿದ ಸಿಎಂ, ನೀರು ನಿಂತಿರುವ ಜಾಗಗಳಲ್ಲಿ ತಕ್ಷಣವೇ ಹೈ-ಪವರ್ ಪಂಪ್‌ಗಳನ್ನು ಅಳವಡಿಸಿ ನೀರನ್ನು ತೆರವುಗೊಳಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ಇದನ್ನೂ ಓದಿ:

ಮುಂದಿನ 7 ದಿನಗಳ ಹವಾಮಾನ ಮುನ್ಸೂಚನೆ

ಹವಾಮಾನ ಇಲಾಖೆಯ ಪ್ರಕಾರ, ಮುಂದಿನ 24 ಗಂಟೆಗಳಲ್ಲಿ ವಾಯುಭಾರ ಕುಸಿತವು ಪೂರ್ವ-ಈಶಾನ್ಯ ದಿಕ್ಕಿಗೆ ಚಲಿಸಲಿದೆ. ಇದರ ಪ್ರಭಾವದಿಂದಾಗಿ ದೆಹಲಿ, ಪಂಜಾಬ್, ಹರಿಯಾಣ, ಚಂಡೀಗಢ, ರಾಜಸ್ಥಾನ ಮತ್ತು ಉತ್ತರಾಖಂಡ್‌ಗಳಲ್ಲಿ ಸೆ. 6ರಂದು ಭಾರೀ ಮಳೆಯಾಗಲಿದೆ. ದೆಹಲಿಯಲ್ಲಿ ಮುಂದಿನ 7 ದಿನಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಸೆ. 7 ಮತ್ತು 8ರಂದು ತಾಪಮಾನವು 34 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪಬಹುದು ಎಂದು ತಿಳಿಸಿದೆ.

Must Read