ಸೊರಬದ ವರದಾ ನದಿಗೆ ಸ್ನಾನಕ್ಕೆ ಇಳಿದ ಯುವಕ ಸಾವು

ಹೊಸದಿಗಂತ ವರದಿ,ಶಿವಮೊಗ್ಗ :

ಮಕರ ಸಂಕ್ರಾಂತಿ ಹಿನ್ನೆಲೆ ನದಿಗೆ ಸ್ನಾನಕ್ಕೆ‌ಇಳಿದ ಯುವಕನೊಬ್ಬ ನೀರಿನಲ್ಲಿ‌ ಮುಳುಗಿ ಮೃತಪಟ್ಟ ಘಟನೆ ಸೊರಬ ತಾಲೂಕಿನ ಆನವಟ್ಟಿ ಹೋಬಳಿಯ ತಲಗಡ್ಡೆ ಸಮೀಪ ವರದಾ ನದಿಯಲ್ಲಿ ಸೋಮವಾರ ನಡೆದಿದೆ.

ಹಾನಗಲ್ಲ ತಾಲೂಕಿನ ನಿಟಗಿನಕೊಪ್ಪ ಗ್ರಾಮದ ಪ್ರವೀಣ್ (25) ಮೃತ ಯುವಕ. ತಲಗಡ್ಡೆ ಸಮೀಪದ ದೇವಸ್ಥಾನಕ್ಕೆಂದು ಕುಟುಂಬ ಸಮೇತರಾಗಿ ಆಗಮಿಸಿದ್ದ ವೇಳೆ, ನದಿಯಲ್ಲಿ‌ ಸ್ನಾನಕ್ಕೆ ಇಳಿದ ಪ್ರವೀಣ್ ನೀರಿನಲ್ಲಿ‌ ಮುಳುಗಿ ಮೃತಪಟ್ಟಿದ್ದಾನೆ. ವಿಷಯ ತಿಳಿದು‌ ಅಗ್ನಿಶಾಮಕ ಠಾಣೆ ಸಿಬ್ಬಂದಿ ಸತತ ಆರು ತಾಸು‌ ಶೋಧ ಕಾರ್ಯ ನಡೆಸಿ, ಯುವಕನ ಶವವನ್ನು ನದಿಯಿಂದ ಮೇಲೆತ್ತಿದ್ದಾರೆ.
ಆನವಟ್ಟಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!