ತಮಿಳು ಬಿಗ್​ಬಾಸ್​ ಗೆದ್ದು ಇತಿಹಾಸ ಸೃಷ್ಟಿಸಿದ ವೈಲ್ಡ್​ಕಾರ್ಡ್​ ಎಂಟ್ರಿ ಅರ್ಚನಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ತಮಿಳು ಬಿಗ್​ಬಾಸ್​ ಸೀಸನ್​ 7 ರಲ್ಲಿ ವೈಲ್ಡ್​ಕಾರ್ಡ್​ ಎಂಟ್ರಿ ಪಡೆದಿದ್ದ ಅರ್ಚನಾ ರವಿಚಂದ್ರನ್ ಅವರು ಟ್ರೋಫಿ ಗೆದ್ದಿದ್ದಾರೆ.

105 ದಿನಗಳ ಕಾಲ ನಡೆದ ಈ ಶೋನಲ್ಲಿ ವಿಜೆ ಅರ್ಚನಾ ರವಿಚಂದ್ರನ್ ಅವರು ಟ್ರೋಫಿ ಗೆದ್ದಿದ್ದಾರೆ. ಈ ಮೂಲಕ 50 ಲಕ್ಷ ರೂ. ನಗದು ಬಹುಮಾನ ಸಿಕ್ಕಿದೆ. 15 ಲಕ್ಷ ರೂಪಾಯಿಯ ಪ್ಲಾಟ್​ ಹಾಗೂ ಒಂದು ಕಾರು ದಕ್ಕಿಸಿಕೊಂಡಿದ್ದಾರೆ. ಈ ಮೂಲಕ ಎರಡು ದಾಖಲೆಗಳನ್ನು ಅರ್ಚನಾ ರವಿಚಂದ್ರನ್​ ಬರೆದಿದ್ದಾರೆ.

26 ವರ್ಷ ಅರ್ಚನಾ ರವಿಚಂದ್ರನ್ ಅವರು ನಿರೂಪಕಿಯಾಗಿದ್ದಾರೆ. ‘ರಾಜ ರಾಣಿ 2’ ಧಾರಾವಾಹಿ ಮೂಲಕ ಕಿರುತೆರೆಗೆ ನಟಿಯಾಗಿ ಕಾಲಿಟ್ಟರು. ನಂತರ ಒಂದಷ್ಟು ಷೋಗಳಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದ ಅರ್ಚನಾ, ಈಗ ಬಿಗ್ ಬಾಸ್ ಶೋಗೆ ಆಗಮಿಸಿದ್ದರು. ಸದ್ಯ ತೆರೆಗೆ ಬರಬೇಕಿರುವ ‘ಡಿಮಾಂಟೆ ಕಾಲೋನಿ 2’ ಸಿನಿಮಾ ಮತ್ತು ‘ಅವಲ್ ಎನ್ನವಲ್’ ಎಂಬ ವೆಬ್ ಸೀರಿಸ್‌ನಲ್ಲೂ ನಟಿಸಿದ್ದಾರೆ. ಇದರ ಜೊತೆಗೆ ಕೆಲವು ಮ್ಯೂಸಿಕ್ ವಿಡಿಯೋಗಳಲ್ಲೂ ಕೂಡ ಅರ್ಚನಾ ರವಿಚಂದ್ರನ್ ಕಾಣಿಸಿಕೊಂಡಿದ್ದಾರೆ.

ಇಲ್ಲಿ ಆಕೆ ಬರೆದ ದಾಖಲೆ ಅಂದರೆ , ಮಹಿಳೆಯೊಬ್ಬರು ಬಿಗ್​ಬಾಸ್​ ಗೆದ್ದಿರುವುದಾದರೆ, ಇನ್ನೊಂದು, ವೈಲ್ಡ್​ ಕಾರ್ಡ್​ ಎಂಟ್ರಿ ಪಡೆದ ಸ್ಪರ್ಧಿಯೊಬ್ಬರು ಹೀಗೆ ಪಡೆದಿರುವುದು ಇತಿಹಾಸ ಸೃಷ್ಟಿಯಾಗಿದೆ.

ಅಕ್ಟೋಬರ್ 1ರಂದು ಶುರುವಾದ ‘ಬಿಗ್ ಬಾಸ್‌’ ತಮಿಳು ಸೀಸನ್‌ 7 ಶೋನಲ್ಲಿ ಒಟ್ಟು 18 ಮಂದಿ ಸ್ಪರ್ಧಿಗಳು ಎಂಟ್ರಿಯಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!