ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಭ್ಯತೆ, ಸಂಸ್ಕೃತಿ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡೋದೇ ಆದರೆ ನನ್ನ ಮುಂದೆ ಬಂದು ಮಾತನಾಡಲಿ ಎಂದು ಉತ್ತರಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಹೇಳಿದ್ದಾರೆ.
ಸಂಸ್ಕೃತಿ ಬಗ್ಗೆ ಚರ್ಚೆ ಮಾಡ್ಬೇಕಾ? ಬನ್ನಿ ನನ್ನ ಮುಂದೆ ನಿಮಗೆ ಸಭ್ಯತೆ ಬಗ್ಗೆಯೂ ಪಾಠ ಮಾಡ್ತೇನೆ ಎಂದು ಹೇಳಿದ್ದಾರೆ. ಸಭ್ಯತೆ ಎನ್ನುವುದೇ ಕಾಂಗ್ರೆಸ್ನವರಿಗೆ ಗೊತ್ತಿಲ್ಲ, ಮಾತನಾಡುವ ಕಲೆ ಮೊದಲೇ ಇಲ್ಲ ಇನ್ನು ಸಂಸ್ಕೃತಿ ಬಗ್ಗೆ ಇನ್ನೇನು ಮಾತನಾಡ್ತಾರೆ ಎಂದಿದ್ದಾರೆ.
ಮೋದಿ ಅವರಿಗೆ ಮಾಸ್ ಮರ್ಡರ್ ಎಂದಿದ್ದಾರೆ, ಇದು ಸರಿಯಾ? ಅವರಿಗೊಂದು ನ್ಯಾಯ ನಮಗೊಂದು ನ್ಯಾಯ ಯಾಕೆ? ಬನ್ನಿ ಎದುರು ಬದುರು ಕುಳಿತು ಚರ್ಚಿಸೋಣ ಎಂದು ಆಹ್ವಾನ ನೀಡಿದ್ದಾರೆ.