ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣಪ್ರತಿಷ್ಠೆಯ ವಿಧವಿಧಾನಗಳು ಈಗಾಗಲೇ ಆರಂಭವಾಗಿವೆ. ಲೋಕಸಭೆ ಚುನಾವಣೆ ಸಮೀಪ ಇದ್ದಂತೆ ಬಿಜೆಪಿ ಬೇಕಂತಲೇ ರಾಮಮಂದಿರ ಉದ್ಘಾಟನೆ ಮಾಡುತ್ತಿದೆ ಎಂದು ವಿಪಕ್ಷಗಳು ಆರೋಪಿಸಿವೆ.
ಅಂತೆಯೇ ಬಿಜೆಪಿ ಮೇಲೆ ಆರೋಪಿಸುವ ತವಕದಲ್ಲಿ ಸಚಿವರುಗಳು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೀಗ ಸಚಿವ ಕೆ.ಎನ್ ರಾಜಣ್ಣ ಕೂಡ ಈ ಸಾಲಿಗೆ ಸೇರಿದ್ದಾರೆ.
ಬಾಬ್ರಿ ಮಸೀದಿ ಕೆಡವಿದ್ದ ನಂತರ ಅಲ್ಲಿಗೆ ಭೇಟಿ ಕೊಟ್ಟಿದೆ. ಗುಡಿಯೊಳಗೆ ಎರಡು ಗೊಂಬೆ ಇಟ್ಟು ರಾಮ ರಾಮ ಎಂದು ಹೇಳ್ತಾ ಇದ್ದರು. ಅಲ್ಲಿ ಯಾವ ಭಕ್ತಿಯ ಭಾವನೆಯೂ ಕಾಣಿಸಿಲ್ಲ. ನಮ್ಮೂರಿನಲ್ಲಿ ಎಷ್ಟೋ ಪುರಾತನ ದೇಗುಲಗಳಿವೆ. ಅಲ್ಲಿದ್ದಷ್ಟು ಸಕಾರಾತ್ಮಕ ಶಕ್ತಿ, ಭಕ್ತಿ ಅಲ್ಲಿರಲಿಲ್ಲ. ಅಯೋಧ್ಯೆಯ ಬಗ್ಗೆ ನನಗೇನು ಅನಿಸಲೇ ಇಲ್ಲ ಎಂದು ಹೇಳಿದ್ದಾರೆ.
ಬೇಕಾದಷ್ಟು ಪುರಾತನ ದೇಗುಲಗಳಿವೆ, ಅವನ್ಯಾಕೆ ಉದ್ಧಾರ ಮಾಡ್ತಿಲ್ಲ. ರಾಜಕೀಯಕ್ಕೆ ಬಿಜೆಪಿ ಮಂದಿರವನ್ನು ಬಳಸಿ ಜನರಿಗೆ ಮೋಸ ಮಾಡುತ್ತಿದೆ ಎಂದಿದ್ದಾರೆ.