ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ಫಿಲ್ಮ್‌ಫೇರ್ ಅವಾರ್ಡ್ಸ್(Filmfare awards) ನಲ್ಲಿ ರಶ್ಮಿಕಾ, ರಣ್‌ಬೀರ್ ಹಾಗೂ ತೃಪ್ತಿ ದಿಮ್ರಿ ಅಭಿನಯದ ಅನಿಮಲ್ (Animal) ಸಿನಿಮಾ 19 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ.
ವರ್ಷದ ಕಡೆಯಲ್ಲಿ ರಿಲೀಸ್ ಆದ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಸಾಕಷ್ಟು ಹೆಸರು ಮಾಡಿತ್ತು. ವೈಲೆನ್ಸ್ ಹಾಗೂ ಸೆಕ್ಸ್‌ನ್ನು ವಿಜೃಂಭಿಸಲಾಗಿದೆ ಎಂದು ಕೆಲವರು ಸಿನಿಮಾ ಇಷ್ಟಪಟ್ಟಿಲ್ಲ.
ಅನಿಮಲ್ ಜೊತೆಗೆ ಡಂಕಿ, ಜವಾನ್, 12th ಫೇಲ್, ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾಗಳು ನಾಮಿನೇಟ್ ಆಗಿವೆ. ಅತ್ಯುತ್ತಮ ಸಿನಿಮಾ ರೇಸ್‌ನಲ್ಲಿ ಜವಾನ್, ಪಠಾಣ್, OMG 2, 12th ಫೇಲ್, ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾಗಳಿವೆ.
ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಪೋಷಕ ನಟಿ ಹಾಗೂ ಇನ್ನಷ್ಟು ಕೆಟಗರಿಗಳಲ್ಲಿ ಅನಿಮಲ್ ನಾಮಿನೇಟ್ ಆಗಿದೆ.