ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀವು ಎಂದಾದರೂ ಅನ್ನದೊಂದಿಗೆ ರುಚಿಕರವಾದ ಕಟ್ಲೆಟ್ ಅನ್ನು ಪ್ರಯತ್ನಿಸಿದ್ದೀರಾ? ಈ ಸ್ಕ್ಯಾಕ್ಸ್ ಅದ್ಭುತವಾಗಿದೆ ಮತ್ತು ನೀವು ಇದನ್ನು ಸಂಜೆಯ ತಿಂಡಿಯಾಗಿ ಮಾಡಿದರೆ ಮಕ್ಕಳು ಇದನ್ನು ಇಷ್ಟಪಡುತ್ತಾರೆ. ಈ ಕಟ್ಲೆಟ್ ಮಾಡುವ ವಿಧಾನ ನೋಡೋಣ:
ಬೇಕಾಗುವ ಸಾಮಗ್ರಿ:
ಅನ್ನ 1 ಕಪ್
ಬೇಯಿಸಿದ ಆಲೂಗಡ್ಡೆ ( ಸಿಪ್ಪೆ ಸುಲಿದು ಮ್ಯಾಶ್ ಮಾಡಿದ್ದು)
ಮಿಕ್ಸ್ ವೆಜಿಟೇಬಲ್( ಬೀನ್ಸ್, ಕ್ಯಾಪ್ತಿಕಂ, ಕೆಂಪು, ಹಳದಿ ಬೆಲ್ ಪೆಪ್ಪರ್
ಈರುಳ್ಳಿ 1
ಶುಂಠಿ 2 ಚಮಚ
ಖಾರದ ಪುಡಿ 1/2 ಚಮಚ
ಕೊತ್ತಂಬರಿ ಸೊಪ್ಪು
2 ಚಮಚ ರುಚಿಗೆ ತಕ್ಕ ಉಪ್ಪು
ಚಿಟಿಕೆಯಷ್ಟು ಅರಿಶಿಣ ಪುಡಿ
1/2 ಚಮಚ ಕೊತ್ತಂಬರಿ ಪುಡಿ
1/2 ಚಮಚ ಕಡ್ಲೆಹಿಟ್ಟಿನ ಪುಡಿ
3 ಚಮಚ ಎಣ್ಣೆ 3 ಚಮಚ
ಮಾಡುವ ವಿಧಾನ:
* ಒಂದು ಬೌಲ್ ತೆಗೆದು ಅದರಲ್ಲಿ ಎಣ್ಣೆ ಬಿಟ್ಟು ಉಳಿದೆಲ್ಲಾ ಸಾಮಗ್ರಿ ಹಾಕಿ.
* ನಂತರ ಕೈಯಿಂದಲೇ ಎಲ್ಲಾ ಸಾಮಗ್ರಿ ಮಿಶ್ರ ಮಾಡಿ.
* ನಿಮಗೆ ಹೆಚ್ಚಿನ ಖಾರ ಬೇಕಿದ್ದರೆ ಇನ್ನೂ ಸ್ವಲ್ಪ ಮೆಣಸಿನ ಪುಡಿ ಸೇರಿಸಬಹುದು.
* ಅನ್ನವನ್ನು ಚೆನ್ನಾಗಿ ಹಿಸುಕಿ.
* ಅದರ ಮೇಲೆ ಕಡ್ಲೆ ಹಿಟ್ಟು ಹಾಕಿ.
* ನಂತರ ಟಿಕ್ಕಿ ಮಾಡಿ.
* ಪ್ಯಾನ್ಗೆ ಎಣ್ಣೆ ಹಾಕಿ ಕಾಯಿಸಿ.
* ನಂತರ ಟಿಕ್ಕಿ ಹಾಕಿ ಎರಡೂ ಬದಿ ಸ್ವಲ್ಪ ಕಂದು ಬಣ್ಣಕ್ಕೆ ಬರುವವರೆಗೆ ಪ್ರೈ ಮಾಡಿ.
* ಈಗ ಅಕ್ಕಿ ಕಟ್ಟೆಟ್ ಸರ್ವ್ ಮಾಡಲು ರೆಡಿ.
ರೆಡಿಯಾದ ಕಡ್ಲೆಟ್ ಅನ್ನು ಕೊತ್ತಂಬರಿ ಅಥವಾ ಪುದೀನಾ ಚಟ್ಟಿ ಜೊತೆ ಸರ್ವ್ ಮಾಡಿ