ರಸ್ತೆ ದಾಟುತ್ತಿದ್ದ ಬಾಲಕ ವಿದ್ಯುತ್‌ ಶಾಕ್‌ಗೆ ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸರಕಾರದ ನಿರ್ಲಕ್ಷ್ಯದಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರಾಜ್ಯದ ಹಲವೆಡೆ ಅಪಾಯಕಾರಿ ವಿದ್ಯುತ್‌ ತಂತಿಗಳು ಬಿದ್ದಿವೆ. ಚಿಕ್ಕಬಳ್ಳಾಪುರದಲ್ಲಿ ಇಂದು ಮುಂಜಾನೆ ವಿದ್ಯುತ್ ಸ್ಪರ್ಶಿಸಿ ಬಾಲಕ ಮೃತಪಟ್ಟಿರುವುದು ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಹೊರಭಾಗದಲ್ಲಿ ವಿದ್ಯುತ್ ತಂತಿ ತುಳಿದು ಎಂಟು ವರ್ಷದ ಬಾಲಕ ಮೃತಪಟ್ಟಿದ್ದಾನೆ. ಮೀನಾಕ್ಷಿ ಮೂರ್ತಿ ಅವರ ಪುತ್ರ ನಾಗೇಂದ್ರ ವಿಧಿವಶರಾಗಿದ್ದಾರೆ.

ರಸ್ತೆ ದಾಟಲು ಯತ್ನಿಸಿದಾಗ ಟ್ರಾನ್ಸ್‌ಫಾರ್ಮರ್‌ನ ಗ್ರೌಂಡ್‌ ವೈರ್‌ಗೆ ವಿದ್ಯುತ್‌ ಶಾಕ್‌ ತಗುಲಿ ಸಾವನ್ನಪ್ಪಿದ್ದಾನೆ. ಸಬ್ ಸ್ಟೇಷನ್ ಬಳಿ ರಸ್ತೆ ಅಗಲೀಕರಣ ಮಾಡಲು ಭೂಮಿಯನ್ನು ತೆರವುಗೊಳಿಸಲಾಗಿದ್ದು, ನೀರು ಸಂಗ್ರಹಗೊಂಡಿದೆ. ರಸ್ತೆ ದಾಟುತ್ತಿದ್ದಾಗ ಅವಘಡ ಸಂಭವಿಸಿದೆ. ಮಂಚೇನಹಳ್ಳಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!