ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೋದ್ರಾ ಮಾದರಿಯ ಘಟನೆ ರಾಜ್ಯದಲ್ಲಿ ಸಂಭವಿಸುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಎಂಎಲ್ಸಿ ಬಿ.ಕೆ. ಹರಿಪ್ರಸಾದ್ ಹೇಳಿದ್ದರು. ಇದರಿಂದಾಗಿ ಸಂಕಷ್ಟಕ್ಕೀಡಾಗಿರುವ ಹರಿಪ್ರಸಾದ್ ಇಂದು ಸಿಸಿಬಿ ಪೊಲೀಸರಿಂದ ವಿಚಾರಣೆ ಎದುರಿಸಿದ್ದಾರೆ.
ಕೆಕೆ ಗೆಸ್ಟ್ಹೌಸ್ನಲ್ಲಿ ಹರಿಪ್ರಸಾದ್ ವಿಚಾರಣೆಗೆ ಪೊಲೀಸರು ಆಗಮಿಸಿದಾಗ ಹರಿಪ್ರಸಾದ್ ಅಸಮಾಧಾನ ಹೊರಹಾಕಿದ್ದಾರೆ. ತಮ್ಮದೇ ಸರ್ಕಾರವಿದ್ದಾಗ ಈ ರೀತಿ ನಡೆಯುತ್ತಿರುವುದಕ್ಕೆ ಗರಂ ಆದ ಹರಿಪ್ರಸಾದ್ ನನಗ್ಯಾವ ವಿಐಪಿ ಟ್ರೀಟ್ಮೆಂಟ್ ಬೇಡ, ಬೇಕಿದ್ರೆ ಅರೆಸ್ಟ್ ಮಾಡ್ಬಿಡಿ ಎಂದು ರೇಗಿದ್ದಾರೆ.
ವಿಚಾರಣೆ ಒಳಪಡಿಸಲು ಸೂಚನೆ ನೀಡಿದ ತಮ್ಮದೇ ಸರ್ಕಾರದ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಕಾಂಗ್ರೆಸ್ ಸರ್ಕಾರವಾ ಅಥವಾ ಆರ್ಎಸ್ಎಸ್ ಸರ್ಕಾರವಾ ತಿಳಿಯುತ್ತಿಲ್ಲ ಎಂದಿದ್ದಾರೆ.
ಇದು ಯಾವ ಸರ್ಕಾರ ಅನ್ನೋದೇ ಗೊತ್ತಾಗ್ತಿಲ್ಲ, ಸಿಸಿಬಿ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಿಲ್ಲ, ನನ್ನನ್ನು ಅರೆಸ್ಟ್ ಮಾಡಿ, ಬೇಕಿದ್ರೆ ಮಂಪರು ಪರೀಕ್ಷೆ ಮಾಡಿ. ನಾನೊಬ್ನೇನಾ ಹೇಳಿಕೆಗಳನ್ನು ಕೊಟ್ಟಿರೋದು? ಕಲ್ಲಡ್ಕ ಪ್ರಭಾಕರ್, ಅನಂತ್ ಕುಮಾರ್ ಹೆಗಡೆ ಹೇಳಿಕೆ ಕೊಟ್ಟಿಲ್ವಾ? ಅವರ ಮೇಲ್ಯಾಕೆ ಕ್ರಮ ಕೈಗೊಳ್ಳೋದಿಲ್ಲ. ಅವರಿಗೆ ರತ್ನಗಂಬಳಿ ನಮಗೆ ಹೀಗ್ಯಾಕೆ? ಈ ಬಗ್ಗೆ ಹೈಕಮಾಂಡ್ ಗಮನಕ್ಕೆ ತರುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.