ಕಟ್ಟುನಿಟ್ಟಿನ ವ್ರತಾಚಾರಣೆಗೆ ಮುಂದಾದ ಪ್ರಧಾನಿ ಮೋದಿ, ಹೇಗಿದೆ ಆಚರಣೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜನವರಿ 22ರಂದು ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಕಟ್ಟುನಿಟ್ಟಿನ ವ್ರತಾಚರಣೆ ಮಾಡುತ್ತಿದ್ದಾರೆ.

ಈ ವ್ರತಾಚರಣೆ ಹೇಗಿದೆ ಗೊತ್ತಾ?

ಪ್ರಧಾನಿ ಮೋದಿಗೆ ಇದೀಗ 73 ವರ್ಷ, ಆದರೆ ಫಿಟ್ ಆಗಿರುವ ಮೋದಿ ಬರೀ ನೆಲದ ಮೇಲೆ ಮಲಗುತ್ತಿದ್ದಾರಂತೆ. ಅಷ್ಟೇ ಅಲ್ಲದೆ ತೆಂಗಿನ ಕಾಯಿಯ ನೀರನ್ನು ಮಾತ್ರ ಸೇವಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಬೆಳಗ್ಗೆ ಬೇಗ ಏಳುವುದು, ಕಟ್ಟುನಿಟ್ಟಿನ ಆಹಾರ ಪದ್ಧತಿ ಹಾಗೂ ದೇಗುಲಗಳಿಗೆ ಪ್ರಧಾನಿ ಮೋದಿ ಭೇಟಿ ನೀಡುತ್ತಿದ್ದಾರೆ.

ರಾಮಮಂದಿರದಂಥ ಶುಭ ಸಮಾರಂಭಕ್ಕೆ ಸಾಕ್ಷಿಯಾಗುತ್ತಿರುವುದು ನಿಜಕ್ಕೂ ಸೌಭಾಗ್ಯ. ನಾನು 11 ದಿನಗಳ ವಿಶೇಷ ವ್ರತಾಚರಣೆ ಮಾಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!